ಉಡುಪಿ : ಇತ್ತೀಚೆಗೆ ಆನ್ಲೈನ್ ವಂಚನೆ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಜನ ಸಾಮಾನ್ಯರು ಮಾತ್ರವಲ್ಲದೆ ಗಣ್ಯರು, ಪೊಲೀಸ್ ಅಧಿಕಾರಿಗಳ ಸಾಮಾಜಿಕ ಜಾಲತಾಣಗಳ ಅಕೌಂಟ್ ಮತ್ತು ವಾಟ್ಯಾಪ್ಗಳನ್ನೂ ಹ್ಯಾಕ್ ಮಾಡಿ ಹಣ ಪೀಕುವವರ ಸಂಖ್ಯೆ ಹೆಚ್ಚುತ್ತಿದೆ.
ಇದೀಗ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಹರಿರಾಂ ಶಂಕರ್ ಇವರ ಹೆಸರಿನಲ್ಲಿಯೂ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಸಾರ್ವಜನಿಕರನ್ನು ಸಂಪರ್ಕಿಸುತ್ತಿರುವ ಬಗ್ಗೆ ವರದಿಯಾಗಿದೆ.
ಹೀಗಾಗಿ ಫೇಸ್‌ಬುಕ್‌ನಲ್ಲಿ ‘ಎಸ್‌ಪಿ ಉಡುಪಿ’ ಎಂಬ ಅಧಿಕೃತ ಸಾಮಾಜಿಕ ಜಾಲತಾಣ ಖಾತೆ ಹೊರತುಪಡಿಸಿ ಬೇರೆ ಯಾವುದೇ ವೈಯಕ್ತಿಕ ಅಥವಾ ಅಧಿಕೃತ ಖಾತೆಗಳು ಇರುವುದಿಲ್ಲ. ಸಾರ್ವಜನಿಕರು ಇಂತಹ ನಕಲಿ ಖಾತೆಗಳಿಗೆ ಪ್ರತಿಕ್ರಿಯಿಸದೇ, ಯಾವುದೇ ವೈಯಕ್ತಿಕ ಮಾಹಿತಿ ಅಥವಾ ಹಣವನ್ನು ಹಂಚಿಕೊಳ್ಳಬಾರದು ಎಂದು ಎಸ್ಪಿ ತಿಳಿಸಿದ್ದಾರೆ.
ಸಂದೇಹಾಸ್ಪದ ಖಾತೆಗಳು ಕಂಡುಬಂದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಅಥವಾ ಫೇಸ್‌ಬುಕ್.ಕಾಮ್ ಮೂಲಕ ರಿಪೋರ್ಟ್ ಮಾಡುವಂತೆ ಎಸ್ಪಿ ಕೋರಿದ್ದಾರೆ.
ಇದನ್ನೂ ಓದಿ : ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 10 ಲಕ್ಷ ಮೌಲ್ಯದ ಗಾಂಜಾ ವಶ, ಮೂವರು ಅರೆಸ್ಟ್!


















