ಯಾದಗಿರಿ : ದಲಿತ ರಾಜಕಾರಿಣಿಗಳ ಸಮಾಧಿ ಮೇಲೆ ನಿಮ್ಮ ಸಾಮ್ರಾಜ್ಯ ಕಟ್ಟಬೇಡಿ. ಪ್ರಿಯಾಂಕ್ ಖರ್ಗೆ ಒಂದು ಬಾರಿ ಗೆದ್ರು ಮಂತ್ರಿ ಎರಡು ಬಾರಿ ಗೆದ್ರು. ಬೇರೆಯವರು ಇಲ್ಲವೇ ಪ್ರಿಯಾಂಕ್ ಅವರನ್ನು ಪ್ರಧಾನಿ ಮಾಡಲಿ ನಮಗೇನು ಮಂತ್ರಿ. ಬೇರೆಯವರು ಇಲ್ಲವೇ ಪ್ರಿಯಾಂಕ್ ಅವರನ್ನು ಪ್ರಧಾನಿ ಮಾಡಲಿ ನಮಗೇನು ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಬೇರೆಯವರ ಪರಿಸ್ಥಿತಿ ನೋಡಬೇಕು ಅಲ್ಲವೇ, ಒಟ್ಟಿನಲ್ಲಿ ದಲಿತರಿಗೆ ಭಾರಿ ಧೋಖಾ ಆಗಿದೆ. ನನ್ನ ಮಗ ಬೆಳಿಬೇಕು, ನಾನು ಬೆಳಿಬೇಕು ಎಂಬುದು ಕಾಂಗ್ರೆಸ್ಸಿನ ಸಂಸ್ಕೃತಿ ಎಂದಿದ್ದಾರೆ.
ಕಲ್ಯಾಣ ಕರ್ನಾಟಕ ಕಲ್ಯಾಣವೇ ಆಗಿಲ್ಲ. ಪ್ರಾದೇಶಿಕ ಅಸಮೋತಲನ ಇದೆ, ಮೈಸೂರು ಮಾತ್ರ ಬೆಳಿಬೇಕಾ. ಯಾದಗಿರಿ ಬೆಳಿಯುವುದು ಬೇಕಿಲ್ಲವೇ? ರಾಜ್ಯದ ಜನರು ಸಂಕಷ್ಟದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.



















