ಮೈಸೂರು: ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಾಗಿ ಬಡ ರೋಗಿಗಳ ಪರದಾಡುವಂತಹ ಸ್ಥಿತಿ ಜಿಲ್ಲೆಯ ಹೆಸ್.ಡಿ ಕೋಟೆ ತಾಲೂಕಿನ ಅಣ್ಣೂರು ಗ್ರಾಮದಲ್ಲಿ ನಡೆದಿದೆ.
ಜನರಿಗೆ ಔಷಧಿ ನೀಡದೆ ಅವಧಿ ಮುಗಿದ ಬಳಿಕ ರಸ್ತೆಗೆ ಎಸೆದು ವೈದ್ಯರ ಕಳ್ಳಾಟವಾಡಿರುವ ಶಂಕೆ ಎದುರಾಗಿದ್ದು, ಹೆಸ್.ಡಿ ಕೋಟೆ ತಾಲೂಕಿನ ಅಣ್ಣೂರು ಗ್ರಾಮದ ಹೊರ ವಲಯದಲ್ಲಿ ಔಷಧಿಗಳನ್ನು ಎಸೆದಿರುವ ದೃಶ್ಯಗಳು ಕಂಡು ಬಂದಿದೆ.
ಅವಧಿ ಮೀರಿದ ಔಷಧಿಗಳನ್ನು ರಸ್ತೆಗೆ ಎಸೆದಿದ್ದಾರೆ. ಹೊಟ್ಟೆ ನೋವು, ಎದೆ ನೋವು, ಪೋಷಕಾಂಶ ಸೇರಿದಂತೆ ಗರ್ಭಿಣಿಯರಿಗೆ ನೀಡಬೇಕಾಗಿರುವ ಮಾತ್ರೆಗಳು, ಇಂಜೆಕ್ಷನ್ ಟ್ಯೂಬ್ ಸಿರಿಂಜ್ ಗಳು ಕಸದ ತೊಟ್ಟಿ ಸೇರಿವೆ. ಅಣ್ಣೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಔಷಧಿ ಎಸೆದಿರುವ ಶಂಕೆ ಮೂಡಿದ್ದು, ಔಷಧಿ ನಿಯಮ ಬದ್ಧವಾಗಿ ವಿಲೇವಾರಿ ಮಾಡದಕ್ಕೆ ಸಾರ್ವಜನಿಕಡು ಕಿಡಿ ಕಾರಿದ್ದಾರೆ.



















