ಬೆಂಗಳೂರು :‘ಫಿನಿಕ್ಸ್’ ಚಿತ್ರದ ಸುತ್ತ ಕೇಳಿಬಂದಿರುವ ಆರೋಪಗಳಿಗೆ ನಿರ್ದೇಶಕ ಓಂಪ್ರಕಾಶ್ ರಾವ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ಜಿ.ಟಿ. ಮಾಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಮ್ಮ ವಿರುದ್ಧ ಕೇಳಿಬಂದಿರುವ ಮೋಸದ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಸಿನಿಮಾ ಮಾಡುವುದಾಗಿ ಹಣ ಪಡೆದು ಚಿತ್ರವನ್ನು ಪೂರ್ಣಗೊಳಿಸಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಓಂಪ್ರಕಾಶ್ ರಾವ್, ಸಿನಿಮಾ ತಡವಾಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ತಾವು ಸಿನಿಮಾಗೆ ಯಾವತ್ತೂ ಮೋಸ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
‘ಫಿನಿಕ್ಸ್’ ಚಿತ್ರದ ವಿಚಾರದಲ್ಲಿ ಭಾಸ್ಕರ್ ಶೆಟ್ಟಿ ತಾವೇ ಹೀರೊ ಎಂಬಂತೆ ಬಿಂಬಿಸಿಕೊಂಡಿದ್ದಾರೆ. ಜಾಹೀರಾತುಗಳಲ್ಲೂ ತಾವೇ ಹೀರೊ ಎಂದು ಪ್ರಚಾರ ಮಾಡಿಕೊಂಡಿದ್ದಾರೆ ಎಂದು ಓಂಪ್ರಕಾಶ್ ರಾವ್ ಆರೋಪಿಸಿದ್ದಾರೆ.
ಚಿತ್ರದ ಕುರಿತಂತೆ ಈಗಾಗಲೇ ಅಗ್ರಿಮೆಂಟ್‌ಗಳೆಲ್ಲವೂ ಆಗಿವೆ. ಇನ್ನೂ ಐದು ದಿನಗಳ ಶೂಟಿಂಗ್ ಪೂರ್ಣಗೊಂಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು ನನ್ನ ಮಾತು ಕೇಳಲು ಅವರು ಸಿದ್ಧರಿಲ್ಲ. ಸಿನಿಮಾ ಪೂರ್ಣಗೊಳಿಸುವ ಉದ್ದೇಶ ನನಗಿದೆ ಎಂದು ಓಂಪ್ರಕಾಶ್ ರಾವ್ ಸ್ಪಷ್ಟಪಡಿಸಿದ್ದಾರೆ.



















