ಕುಂದಾಪುರದ ಜಪ್ತಿ ಗ್ರಾಮದ ಗುಟ್ರುಕೊಡಿಯ ರತ್ನಾಕರ್ ಶೆಟ್ಟಿ ಅವರ ನಿವಾಸದಲ್ಲಿ ರಾತ್ರಿ ಊಟದ ಬಳಿಕ ಬೃಹತ್ ಗಾತ್ರದ ಹಸಿದ ಹೆಬ್ಬಾವೊಂದು ಪ್ರತ್ಯಕ್ಷವಾಗಿದೆ. ಹಾವಿನ ಚಲನವಲನದ ಸದ್ದಿಗೆ ಎಚ್ಚೆತ್ತ ಮನೆಯವರು, ಉರಗ ಪ್ರೇಮಿ ರಾಜೇಶ್ ಹಾಗೂ ಸ್ಥಳೀಯರ ಸಹಕಾರದಿಂದ ಅದನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಒಂದೆಡೆ ಪಕ್ಕದ ದಬ್ಬೆಕಟ್ಟೆಯಲ್ಲಿ ಚಿರತೆ ಓಡಾಟದಿಂದ ಚಿಂತೆಯಲ್ಲಿದ್ದ ಜನರಿಗೆ, ಈಗ ಬೃಹತ್ ಗಾತ್ರದ ಹಾವಿನ ಎಂಟ್ರಿ ಮತ್ತಷ್ಟು ಹೈರಾಣಾಗುವಂತೆ ಮಾಡಿದೆ.



















