ಕಲಬುರ್ಗಿ : ರಥದ ಚಕ್ರದಡಿ ಸಿಲುಕಿ ಭಕ್ತ ಸಾವನ್ನಪ್ಪಿರುವ ಘಟನೆ ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿರುವ ಶರಣಬಸವೇಶ್ವರ ರಥೋತ್ಸವದಲ್ಲಿ ನಡೆದಿದೆ.
ಹಾಗರಗುಂಡಗಿ ಗ್ರಾಮದ ನಿವಾಸಿ ವಿನೋದ ರೆಡ್ಡಿ (40) ಮೃತ ದುರ್ದೈವಿ. ನಿನ್ನೆ ಸಂಜೆ ಅದ್ದೂರಿಯಾಗಿ ನಡೆದಿದ್ದ ಶ್ರೀ ಶರಣಬಸವೇಶ್ವರ ದೇವರ ರಥೋತ್ಸವದ ವೇಳೆ ಆಯಾತಪ್ಪಿ ರಥದ ಚಕ್ರದಡಿ ಬಿದ್ದ ವಿನೋದ್ ರೆಡ್ಡಿಯ ತೊಡೆ ಮೇಲಿಂದ ರಥದ ಚಕ್ರ ಹರಿದಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಪ್ರಕರಣ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಪೊಲೀಸರು ಮೃತದೇಹವನ್ನು ಕುಂಟುಬಸ್ಥರಿಗೆ ನೀಡಲಾಗುವುದು ಎಂದು ತಿಳಿದಿದೆ.
ಇದನ್ನೂ ಓದಿ : ಮಡಿಕೇರಿ ಬೆನ್ನಲ್ಲೇ ಚಂದ್ರದ್ರೋಣ ಪರ್ವತಕ್ಕೆ ಭೇಟಿ ನೀಡಿದ್ದ ಕೇರಳದ ಮತ್ತೋರ್ವ ಯುವತಿ ನಾಪತ್ತೆ!


















