ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಮೆಜೆಸ್ಟಿಕ್‌ನ ಎರಡು ಬಸ್ ಟರ್ಮಿನಲ್‌ಗಳಲ್ಲಿ ಪ್ರಯಾಣಿಕರ ಭಾರೀ ಜನಸಾಗರವೇ ಸೇರಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 2,600 ಹೆಚ್ಚುವರಿ ಬಸ್‌ಗಳ ಸೇವೆಯನ್ನು ಕಲ್ಪಿಸಲಾಗಿದೆ.
ಬಸ್ ಟಿಕೆಟ್ ದರ ಏರಿಕೆ ನಡುವೆಯೂ ಜನರು ಊರ ಕಡೆ ಪ್ರಯಾಣ ಬೆಳೆಸುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.



















