ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ‘ನಾವು ಹಳ್ಳಿಯವರೇ’ ಎಂಬ ಪೋಸ್ಟರ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಭಾರಿ ತಿರುಗೇಟು ನೀಡಿದ್ದಾರೆ.
ಭಾರತದ ಆತ್ಮ ಹಳ್ಳಿಗಳಲ್ಲಿದೆ, ಆದರೆ ನಿಮ್ಮ ಆತ್ಮ ತಾಜ್ ವೆಸ್ಟೆಂಡ್ನಲ್ಲಿದೆ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ. ಹಳ್ಳಿಗರಾಗುವುದು ಹೆಮ್ಮೆಯೇ, ಆದರೆ ನೀವು ಗುಗ್ಗುತನದ ಪ್ರದರ್ಶನ ಮಾಡಬೇಡಿ ಎನ್ನುವುದಷ್ಟೇ ನನ್ನ ಕಳಕಳಿ ಮತ್ತು ಸಲಹೆ ಎಂದು ಕುಟುಕಿದ್ದಾರೆ. ಅಧಿಕಾರ ಇಲ್ಲದಾಗ ಹಳ್ಳಿಯ ಹಟ್ಟಿ ಜಪ ಮಾಡುವ ನಿಮಗೆ, ಅಧಿಕಾರವಿದ್ದಾಗ ತಾಜ್ ವೆಸ್ಟೆಂಡ್ನ ವಿಲಾಸಿ ಜೀವನ ಆಕರ್ಷಿಸುತ್ತದೆ ಅಲ್ಲವೇ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಹಳ್ಳಿಗರ ನಂಬಿಕೆ ಮತ್ತು ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡು ಮೊಸಳೆ ಕಣ್ಣೀರು ಸುರಿಸುತ್ತಾ ಮಂಕುಬೂದಿ ಎರಚುವ ನಿಮ್ಮ ಸೀರಿಯಲ್ ನಾಟಕವನ್ನು ನಂಬುವುದಕ್ಕೆ ಹಳ್ಳಿಗರು ಮೂರ್ಖರಲ್ಲ, ನಗರದವರೂ ಮುಗ್ಧರಲ್ಲ ಎಂದು ಪ್ರಿಯಾಂಕ್ ಖರ್ಗೆ ಪೋಸ್ಟ್ ಮೂಲಕ ಭಾರಿ ಟಾಂಗ್ ನೀಡಿದ್ದಾರೆ.


















