ಬೆಂಗಳೂರು : ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಕ್ರೂಡ್ ಆಯಿಲ್ ಸರಿಯಾದ ಸಮಯಕ್ಕೆ ನಮಗೆ ತಲುಪಲು ಸಾದ್ಯವಾಗುತ್ತಿಲ್ಲ. ಇದು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೂ ಕೂಡ ಅರ್ಥ ಆಗುತ್ತದೆ. ಆದ್ರೆ ಕಾಂಗ್ರೆಸ್‌ನವರಿಗೆ ಮಾತ್ರ ಇದು ಅರ್ಥ ಆಗಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯ ಬಗ್ಗೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪದ ವಿಚಾರವಾಗಿ ಮಾತನಾಡಿದ ಛಲವಾದಿ, ನಮಗಿರುವ ಮಾಹಿತಿ ಪ್ರಕಾರ ಇದು ತಾತ್ಕಾಲಿಕವಾಗಿ ಆಗಿರುವ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಭಾರತ ದೇಶ, ಕರ್ನಾಟಕ ಕಾರಣ ಅಲ್ಲ. ಇದನ್ನ ನಾವೆಲ್ಲರೂ ಅರ್ಥ ಮಾಡ್ಕೊಂಡು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು. ಆದರೆ ಕಾಂಗ್ರೆಸ್‌ನವರು ಇಂತಹಹ ಸಂಧರ್ಭದಲ್ಲೂ ಕೂಡ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕೇಂದ್ರ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಸತತವಾಗಿ ಪ್ರಯತ್ನ ಪಡುತ್ತಿದೆ. ಈಗಾಗಲೇ ಕ್ರೂಡ್ ಆಯಿಲ್ ಭಾರತ ರೀಚ್ ಆಗ್ತಿದೆ. ಇದು ಯಾವುದು ಭಾರತ ಕ್ರಿಯೇಟ್ ಮಾಡಿದ್ದಲ್ಲ. ಇದರಲ್ಲಿ ಬೇಳೆ ಬೇಯಿಸಿಕೊಳ್ಳಲು ಹೋದರೆ ಇವರಿಗೆ ಕಾಮನ್ ಸೆನ್ಸ್ ಇಲ್ಲ ಅಂತ ಜನರಿಗೆ ಅರ್ಥ ಆಗುತ್ತದೆ. ಪೆಟ್ರೋಲ್, ಡಿಸೇಲ್‌ನಲ್ಲಿ ವ್ಯತ್ಯಯ ಆಗಿರಲಿಲ್ಲ. ಗ್ಯಾಸ್ ಪೂರೈಕೆಯಲ್ಲಿ ಮಾತ್ರ ವ್ಯತ್ಯಯ ಆಗಿತ್ತು ಈಗ ಅದನ್ನ ಹೆಚ್ಚು ತಯಾರು ಮಾಡುವ ಕೆಲಸ ಕೇಂದ್ರ ಸರ್ಕಾರ ಮಾಡ್ತಿದೆ. ಸಧ್ಯದಲ್ಲೇ ಎಲ್ಲವೂ ಬಗೆಹರಿಯುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನ ಕ್ರಿಕೆಟ್‌ನ ಸುವರ್ಣ ಯುಗದ ಸಾರಥಿ ಸರ್ಫರಾಜ್ ಅಹ್ಮದ್ ನಿವೃತ್ತಿ!



















