ಉಡುಪಿ : ಪರಶುರಾಮ ಥೀಂ ಪಾರ್ಕ್ ಮೇಲ್ಛಾವಣಿ ಕದ್ದವರು ಕಾಂಗ್ರೆಸ್ ಬ್ರದರ್ಸ್. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಅವರಿಗೆ ಅಭಿನಂದನೆಗಳು ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
ಕಾರ್ಕಳದಲ್ಲಿ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಪರಶುರಾಮ ಥೀಂ ಪಾರ್ಕ್ ಹಾಳು ಬೀಳುವಂತೆ ಮಾಡಿದ್ದು ಕಾಂಗ್ರೆಸ್. ಕಳೆದ ವಾರ ಥೀಮ್ ಪಾರ್ಕ್ ನಲ್ಲಿ ನಡೆದ ಕಳ್ಳತನ ಪ್ರಕರಣ ವಿಚಾರವಾಗಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಅವರಿಗೆ ಅಭಿನಂದನೆಗಳು. ಕರಾವಳಿಯಲ್ಲಿ ಪರಶುರಾಮನ ಹೆಜ್ಜೆ ಗುರುತು ಇರಲೇಬಾರದು ಎಂದು ಥೀಮ್ ಪಾರ್ಕ್ ಕಾಮಗಾರಿಯನ್ನ ಅರ್ಧಕ್ಕೆ ನೀವು ನಿಲ್ಲಿಸಿದ್ದೀರಿ ಈಗ ನಿಮ್ಮ ಮತ ಬ್ಯಾಂಕ್‌ನ ಪುಂಡರು ಇಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇವರಿಗೆ ಈ ಧೈರ್ಯ ಬಂದಿದ್ದು ಎಲ್ಲಿಂದ? ಕಾಂಗ್ರೆಸ್ನ ಹಿಂದೂ ವಿರೋಧಿ ಭಾವನೆ, ಬಲದಿಂದಲ್ಲವೇ? ಏನು ಬೇಕಾದರೂ ಮಾಡಿ ನಾವಿದ್ದೇವೆ ಎಂಬಾ ಚಿತಾವಣೆಯಿಂದಲೋ? ಇಂದು ಭಾವನೆಗಳಿಗೆ ಘಾಸಿ ಮಾಡಿರುವವರ ಜೊತೆಗೆ ಪ್ರವಾಸೋದ್ಯಮಕ್ಕೆ ಅಡ್ಡಿ ಮಾಡಿದ್ದೀರಿ. ಮುಂದಿನ ಚುನಾವಣೆಯ ವರೆಗಲ್ಲ ಶತಶತಮಾನಗಳವರೆಗೂ ಸ್ಥಾಯಿಯಾಗಿರುತ್ತದೆ. ಇಲ್ಲಿಂದಲೇ ಕಾಂಗ್ರೆಸ್ ಅದ ಪತನ ಕ್ಷಣಗಣನೆ ಪ್ರಾರಂಭ ಎಂದು ಆಕ್ರೋಶಿಸಿದ್ದಾರೆ.
ಇದನ್ನೂ ಓದಿ : ಪರಶುರಾಮ ಥೀಮ್ ಪಾರ್ಕ್ನ ತಾಮ್ರ ಹೊದಿಕೆ ಕದ್ದ ಕಳ್ಳರು ಸೆರೆ



















