ಬೆಂಗಳೂರು : ‘ಕಂಗ್ರಾಜುಲೇಷನ್ಸ್ ಬ್ರದರ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಒಂದು ಬ್ಯೂಟಿಫುಲ್ ಕಥೆಯ ಜಾಡು ಹಿಡಿದಿದೆ. ಇಬ್ಬರು ಹುಡುಗಿಯರು ಒಬ್ಬನನ್ನೇ ಮದುವೆಯಾದ್ರೆ ಏನೆಲ್ಲಾ ಎಡವಟ್ಟು ಆಗುತ್ತೆ ಎಂಬುದನ್ನ ಸಿನಿಮಾ ಕಾಮೆಡಿಯಾಗಿ ತೋರಿಸುತ್ತೆ.

ಅಬ್ಬಬ್ಬಾ ಲಾಟರಿ ಎನ್ನುತ್ತಾ ಹೀರೊ ಅದನ್ನ ಎಂಜಾಯ್ ಮಾಡ್ತನಾ? ಅಥವಾ ಹೊಸ ಪೇಚಿಗೆ ಸಿಲುಕಿಹಾಕಿಕೊಳ್ತನಾ ಎಂಬ ಇಂಟ್ರೆಸ್ಟಿಂಗ್ ಲೈನ್ ಟ್ರೈಲರ್‌ನಲ್ಲಿದೆ.

ಪ್ರತಾಪ್ ಗಂಧರ್ವ ಡೈರೆಕ್ಷನ್‌ಗೆ ಪ್ರಶಾಂತ್ ಕಲ್ಲೂರ್ ನಿರ್ಮಾಣವಿದೆ. ಹರೀಶ್ ರೆಡ್ಡಿ ನಿರ್ಮಾಣಕ್ಕೆ ಸಾಥ್ ಕೊಟ್ಟಿದ್ದಾರೆ. ಹರಿ ಸಂತೋಷ್ ಕ್ರಿಯೆಟಿವ್ ಎಫೆಕ್ಟ್ ಚಿತ್ರಕ್ಕಿದೆ. ರಕ್ಷಿತ್ ನಾಗ್ ನಟನೆ ಜೊತೆ ತಮ್ ಸಿಂಗಿಂಗ್ ಟ್ಯಾಲೆಂಟ್ ತೋರಿಸ್ತಾರೆ. ಸಂಜನಾ, ಅನುಷಾ, ಶಶಿಕುಮಾರ್, ಚೇತನ್ ದುರ್ಗಾ, ಸುದರ್ಶನ್ ಭಾರದ್ವಜ್, ರಕ್ಷಿತ್ ಕಾಪು, ರಘು ರಾಮನಕೊಪ್ಪ, ರವಿ ಭಟ್ ತಾರಾಗಣ ಮಜಾ ಕೊಡ್ತಿದೆ. ವಿತರಕ ಮುನಿಂದ್ರ ಡಿಸ್ಟ್ರಿಬ್ಯುಷನ್‌ನಲ್ಲಿ ಸಿನಿಮಾ ನ.21ಕ್ಕೆ ರಿಲೀಸ್ ಆಗ್ತಿದೆ.
ಇದನ್ನೂ ಓದಿ : ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ



















