ಬೆಂಗಳೂರು: ನಟ ಕಿಶನ್ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ನಿವೇದಿತ ಗೌಡ ವಿರುದ್ಧ ನವಿಲು ಗರಿ ಬಳಕೆ ಆರೋಪದಡಿ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದು, ಇಬ್ಬರೂ ನವಿಲು ಗರಿ ಉಡುಪು ಧರಿಸಿ ರೀಲ್ಸ್ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಬಳಸಿರುವುದು ನೈಜ ನವಿಲು ಗರಿಯೇ ಅಥವಾ ಕೃತಕ ಗರಿಯೇ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲನೆ ಮಾಡಬೇಕೆಂದು ದೂರುದಲ್ಲಿ ಆಗ್ರಹಿಸಲಾಗಿದೆ.
ನೈಜ ನವಿಲು ಗರಿಯಾಗಿದ್ದರೆ ಅದರ ಮೂಲ, ಸಾಗಣೆ ಹಾಗೂ ಕಾನೂನುಬದ್ಧತೆ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ. ಪ್ರಕರಣದ ಕುರಿತು ಅರಣ್ಯ ಇಲಾಖೆ ಪರಿಶೀಲನೆ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ : ಮಳೆಯಿಲ್ಲದೇ ಮಂಕಾದ ಜಲಾಶಯ : ಶರಾವತಿ ತೀರದಲ್ಲಿ ಬಯಲಾಗುತ್ತಿವೆ ನೆಲ



















