ಬೆಂಗಳೂರು : ಪ್ರತಿ ತಿಂಗಳು 8-10 ಸಾವಿರ ಇಎಂಐ ಪಾವತಿಸಿದರೆ ಆಯಿತು. ಮನೆಗೊಂದು ಚೆಂದದ ಕಾರು ತರಬೇಕು ಎಂದು ಬಯಸುತ್ತಿದ್ದೀರಾ? ಹಾಗಾದರೆ, ನಿಮಗೆ ಈ ಸುದ್ದಿ ಹೆಚ್ಚು ಅನ್ವಯವಾಗುತ್ತದೆ. ಏಕೆಂದರೆ, ಮೇ ತಿಂಗಳಲ್ಲಿ ಹಲವು ಬ್ಯಾಂಕ್ ಗಳು ಕಾರ್ ಲೋನ್ ಬಡ್ಡಿದರವನ್ನು ಪರಿಷ್ಕರಣೆ ಮಾಡಿವೆ. ಹಾಗಾಗಿ, ಬ್ಯಾಂಕುಗಳು ವಿಧಿಸುವ ಬಡ್ಡಿದರವನ್ನು ಗಮನದಲ್ಲಿಟ್ಟುಕೊಂಡರೆ ಅನುಕೂಲವಾಗುತ್ತದೆ. ಪ್ರಮುಖ ಬ್ಯಾಂಕ್ ಗಳ ಬಡ್ಡಿದರದ ಪಟ್ಟಿ ಇಲ್ಲಿದೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಬಡ್ಡಿ
ಬ್ಯಾಂಕ್ ಬಡ್ಡಿದರ
- ಯೂನಿಯನ್ ಬ್ಯಾಂಕ್ 7.60%
- ಬ್ಯಾಂಕ್ ಆಫ್ ಬರೋಡಾ 7.60%
- ಪಂಜಾಬ್ ನ್ಯಾಷನಲ್ ಬ್ಯಾಂಕ್ 7.65%
- ಕೆನರಾ ಬ್ಯಾಂಕ್ 7.95%
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 8.90%
ಖಾಸಗಿ ಬ್ಯಾಂಕ್ ಗಳ ಬಡ್ಡಿದರದ ಪಟ್ಟಿ
- ಐಡಿಬಿಐ ಬ್ಯಾಂಕ್ 7.75%
- ಐಸಿಐಸಿಐ ಬ್ಯಾಂಕ್ 8.50%
- ಆಕ್ಸಿಸ್ ಬ್ಯಾಂಕ್ 8.95%
- ಎಚ್ ಡಿ ಎಫ್ ಸಿ 9.00%
- ಐಡಿಎಫ್ ಸಿ ಫಸ್ಟ್ ಬ್ಯಾಂಕ್ 9.99%
ಕಾರ್ ಲೋನ್ ಮುನ್ನ ಗಮನಿಸಬೇಕಾದ ಸಂಗತಿಗಳು
- ಕೇವಲ ಬಡ್ಡಿದರವನ್ನು ಗಮನಿಸಬೇಡಿ. ಪ್ರೊಸೆಸಿಂಗ್ ಶುಲ್ಕಗಳು ಹಾಗೂ ಗೌಪ್ಯ ಶುಲ್ಕಗಳನ್ನು ಗಮನಿಸಿ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ.
- ಕಾರ್ ಲೋನ್ ಮಾಡಿಸಲು ನಿಮ್ಮ ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ಅನುಕೂಲ. ಇಲ್ಲದಿದ್ದರೆ ಬ್ಯಾಂಕ್ ಗಳು ಸಾಲ ನೀಡುವುದಿಲ್ಲ. ಇಲ್ಲವೇ, ಹೆಚ್ಚಿನ ಬಡ್ಡಿ ವಿಧಿಸುತ್ತವೆ.
- ಸಾಲದ ಮರುಪಾವತಿ ಅವಧಿಯನ್ನು ಜಾಣ್ಮೆಯಿಂದ ಆಯ್ದುಕೊಳ್ಳಿ. ದೀರ್ಘಾವಧಿಯ ಮರುಪಾವತಿಯು ಹೆಚ್ಚಿನ ಬಡ್ಡಿ ಪಾವತಿಸುವಂತೆ ಮಾಡುತ್ತದೆ.
- ಅವಧಿಗೂ ಮುನ್ನ ಸಾಲದ ಮರುಪಾವತಿ ಮಾಡುವ ಯೋಜನೆ ಇದ್ದರೆ, ಪ್ರಿ-ಪೇಮೆಂಟ್ ಶುಲ್ಕಗಳ ಬಗ್ಗೆ ನಿಗಾ ಇರಲಿ.
- ಸ್ಥಿರ ಬಡ್ಡಿದರ ಇರುತ್ತದೆಯೋ, ಫ್ಲೋಟಿಂಗ್ ಬಡ್ಡಿದರ ಇದೆಯೋ ನೋಡಿ. ಸ್ಥಿರ ಬಡ್ಡಿದರವು ಸಾಲದ ಅವಧಿ ಮುಗಿಯುವವರೆಗೆ ಏಕ ರೀತಿಯ ಇಎಂಐ ಕಟ್ಟಬೇಕಾಗುತ್ತದೆ. ಫ್ಲೋಟಿಂಗ್ ಆದರೆ, ರೆಪೊ ದರದ ಮೇಲೆ ಅವಲಂಬನೆಯಾಗಿರುತ್ತದೆ.
ಇದನ್ನೂ ಓದಿ : ಫೇಕ್ ನಂಬರ್ ಪ್ಲೇಟ್, ವೃತ್ತಿಪರ ಶೂಟರ್‌ಗಳ ಕೈವಾಡ : ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಭೀಕರ ಹತ್ಯೆ ನಡೆದಿದ್ದು ಹೇಗೆ?



















