ಯುದ್ಧ ನಿಲ್ಲಿಸಿದ್ದು ನಾನೇ ಎನ್ನುತ್ತಿದ್ದ ಬಡಾಯಿ ರಾಜ ಟ್ರಂಪ್ಗೆ ಅಮೆರಿಕದಲ್ಲಿ ಭಾರೀ ಮುಖಭಂಗವಾಗಿದೆ. ಇರಾನ್ ಯುದ್ಧವು ಟ್ರಂಪ್ ಜಂಗಾಬಲ ಉಡಾಯಿಸಿದೆ. ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಭಾರೀ ಸೋಲು ಕಂಡಿದೆ. ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಗಳು ದರ್ಬಾರ್ ನಡೆಸಿದ್ದು, ಇರಾನ್ ವಿರುದ್ಧದ ಯುದ್ಧವೇ ಈ ಸೋಲಿಗೆ ಕಾರಣ ಎಂದು ಟ್ರಂಪ್ ಹೇಳಿದ್ದಾರೆ.
ಇನ್ನು ಈ ಚುನಾವಣೆಯಲ್ಲಿ ಭಾರತೀಯ ಮೂಲದ 6 ಜನರಿಗೆ ಭರ್ಜರಿ ಜಯ ಸಿಕ್ಕಿದ್ದು, ಕರ್ನಾಟಕದ ಅಳಿಯ ಅಬ್ದುಲ್ ಎಂಬುವರು ದಾಖಲೆಯ ಜಯ ಸಾಧಿಸಿದ್ದಾರೆ. ಕೆಳಮನೆಯ ಒಟ್ಟು 435 ಸ್ಥಾನಗಳ ಪೈಕಿ ಮ್ಯಾಜಿಕ್ ನಂಬರ್ 218 ಆಗಿದ್ದು, ಇಲ್ಲಿ ಡೆಮಾಕ್ರಟಿಕ್ ಪಾರ್ಟಿ 237 ಸ್ಥಾನಗಳನ್ನು ಗೆದ್ದುಕೊಂಡರೆ, ಟ್ರಂಪ್ ಅವರ ರಿಪಬ್ಲಿಕನ್ ಪಾರ್ಟಿ ಕೇವಲ 139 ಸ್ಥಾನಗಳನ್ನು ಪಡೆದಿದೆ. ಹಾಗೆಯೇ ಸೆನೆಟ್ ಅಂದರೆ ಮೇಲ್ಮನೆಯ ಒಟ್ಟು 100 ಸ್ಥಾನಗಳಲ್ಲಿ ಮ್ಯಾಜಿಕ್ ನಂಬರ್ 51 ಆಗಿದ್ದು, ಇಲ್ಲಿಯೂ ಡೆಮಾಕ್ರಟಿಕ್ 54 ಸ್ಥಾನ ಗಳಿಸಿದ್ದರೆ, ಟ್ರಂಪ್ ಅವರ ರಿಪಬ್ಲಿಕನ್ ಪಾರ್ಟಿ 44 ಸ್ಥಾನಕ್ಕೆ ಕುಸಿದಿದೆ.



















