ಇಂದು ವಿಶ್ವದಾದ್ಯಂತ ‘ರಾಮಾಯಣ’ ಚಿತ್ರ ತೆರೆಗೆ ಅಪ್ಪಳಿಸಿದೆ. ರಾಮಾಯಣದ ಮೊದಲ ಭಾಗವು 6 ಭಾಷೆಗಳಲ್ಲಿ, 2ಡಿ ಮತ್ತು 3ಡಿಯಲ್ಲಿ ಒಟ್ಟು 100 ದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಭಾರತದಲ್ಲೇ ಬರೋಬ್ಬರಿ 9 ಸಾವಿರ ಸ್ಕ್ರೀನ್ಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಬೆಂಗಳೂರಿನಲ್ಲೂ ರಾಮಾಯಣಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದೆ.
ಮೆಜೆಸ್ಟಿಕ್ನ ಸಂತೋಷ್ ಚಿತ್ರಮಂದಿರದಲ್ಲಿ ಭರ್ಜರಿ ಸೆಲೆಬ್ರೇಷನ್ ನಡೆದಿದ್ದು, ಬೆಳಿಗ್ಗೆ 6 ಗಂಟೆಗೆ ಶೋಗಳು ಶುರುವಾಗಿವೆ. ಫ್ಯಾನ್ಸ್ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ರಾಮಾಯಣದ ದೃಶ್ಯ ವೈಭವಕ್ಕೆ ಕನ್ನಡಿಗರು ಬೆರಗಾಗಿದ್ದಾರೆ. 10 ತಲೆಗಳ ರಾವಣನಾಗಿ ‘ಅಣ್ತಮ್ಮ’ ರಾಕಿಂಗ್ ಸ್ಟಾರ್ ಯಶ್ ಡೈಲಾಗ್ ಸುರಿಮಳೆ ಸುರಿಸಿದ್ದಾರೆ. ‘ಭಸ್ಮದಿಂದ ಎದ್ದವನು ಬೆಂಕಿಗೆ ಅಂಜುವನೇ..?’, ‘ತಲೆ ಎತ್ತಿದರೆ ಮರಣವೇ ಗತಿ..!’ ಎಂಬ ಮಾಸ್ ಸಂಭಾಷಣೆಗಳೊಂದಿಗೆ ಭರ್ಜರಿ ಆಕ್ಷನ್ನಲ್ಲಿ ಯಶ್ ಮಿಂಚಿದ್ದಾರೆ.
ಚಿತ್ರದಲ್ಲಿ ರಾಮನಿಗಿಂತ ಮೊದಲೇ ರಾವಣನ ಪರಿಚಯ ಮಾಡಿಸಲಾಗಿದ್ದು, ಸೆಕೆಂಡ್ ಹಾಫ್ನಲ್ಲೂ ಲಂಕಾಧಿಪತಿ ಯಶ್ ಆರ್ಭಟ ಜೋರಾಗಿದೆ. ಇದು ಯಶ್ ಫ್ಯಾನ್ಸ್ಗೆ ಬಿಗ್ ಟ್ರೀಟ್ಮೆಂಟ್ ನೀಡಿದೆ. ಇನ್ನು ಸೌಮ್ಯರೂಪದ ಪ್ರತೀಕ ರಾಮನಾಗಿ ರಣಬೀರ್ ಕಪೂರ್ ಮತ್ತು ಸೀತಾಮಾತೆಯಾಗಿ ಸಾಯಿಪಲ್ಲವಿ ಎಂಟ್ರಿ ಕೊಟ್ಟಿದ್ದಾರೆ. ಒಟ್ಟಾರೆ ಚಿತ್ರದ ಬೃಹತ್ ಬಜೆಟ್ ಮತ್ತು ನಿರೂಪಣೆಗೆ ಪ್ರೇಕ್ಷಕರು ಮನಸೋತಿದ್ದಾರೆ.


















