ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾರು ಪಾರ್ಟ್ಸ್ ಕದ್ದು ವ್ಯಕ್ತಿಯೋರ್ವ ಪರಾರಿಯಾಗಿರುವ ಘಟನೆ ನಡೆದಿದೆ.
ಮನೆ ಮುಂದೆ ಪಾರ್ಕ್ ಮಾಡಿದ್ದ ಕಾರುಗಳ ಪಾರ್ಟ್ಸ್ ಗಳನ್ನು ಕಳ್ಳತನ ಮಾಡುವುದೇ ಆತನ ಕಾಯಕವಾಗಿದೆ. ಈತ ರೆಸಿಡೆನ್ಸಿ ಏರಿಯಾಗಳಲ್ಲಿ ನಿತ್ಯ ರೌಂಡ್ಸ್ ಹೊಡೆಯುತ್ತಾನೆ.
ಕಾರುಗಳು ಮತ್ತು ಏರಿಯಾ ಬಗ್ಗೆ ತಿಳಿದುಕೊಂಡು ಬೆಳಗಿನ ಜಾವ ಎಂಟ್ರಿ ಕೊಡುತ್ತಾನೆ. ಬಳಿಕ ಕಾರಿನ ಚಕ್ರಗಳು, ಕನ್ನಡಿ ಹಾಗೂ ಇತರೆ ಪಾರ್ಟ್ಸ್ ಗಳನ್ನು ಬಿಚ್ಚಿಕೊಂಡು ಎಸ್ಕೇಪ್ ಆಗುತ್ತಾನೆ. ಜಯನಗರ ವ್ಯಾಪ್ತಿಯಲ್ಲಿ ಈ ಖತರ್ನಾಕ್ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾರು ಮಾಲೀಕರಿಂದ ಜಯನಗರ ಠಾಣೆಗೆ ದೂರು ನೀಡಿದ್ದಾರೆ.



















