ಬೆಂಗಳೂರು : ಜಾಗತಿಕ ಮಾರುಕಟ್ಟೆಯಲ್ಲಿ ಗೇಮಿಂಗ್ ಲ್ಯಾಪ್‌ಟಾಪ್‌ಗಳ ಮೂಲಕವೇ ದೊಡ್ಡ ಹೆಸರು ಮಾಡಿರುವ ಅಸೂಸ್ (Asus) ಕಂಪನಿ, ತನ್ನ ಬಹುನಿರೀಕ್ಷಿತ ‘ರಾಗ್ ಝೆಫಿರಸ್ ಡ್ಯುಯೊ 2026 ಜಿಎಕ್ಸ್651’ (ROG Zephyrus Duo 2026 GX651) ಲ್ಯಾಪ್‌ಟಾಪ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.
ಈ ವರ್ಷದ ಆರಂಭದಲ್ಲಿ ನಡೆದ ಸಿಇಎಸ್ (CES) 2026 ರ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದ್ದ ಈ ವಿಶ್ವದ ಮೊದಲ 16-ಇಂಚಿನ ಡ್ಯುಯಲ್-ಸ್ಕ್ರೀನ್ ಗೇಮಿಂಗ್ ಲ್ಯಾಪ್‌ಟಾಪ್, ಇದೀಗ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆಸಿದೆ. ಈ ಕುರಿತಂತೆ ಬಿಡುಗಡೆಯ ದಿನಾಂಕ, ನಿರೀಕ್ಷಿತ ಬೆಲೆ ಹಾಗೂ ಪ್ರಮುಖ ಫೀಚರ್ಸ್ ಕುರಿತ ಮಾಹಿತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.
ಭಾರತದಲ್ಲಿ ನಿರೀಕ್ಷಿತ ಬೆಲೆ ಎಷ್ಟು?
ವರದಿಗಳ ಪ್ರಕಾರ, ಅಸೂಸ್ ರಾಗ್ ಝೆಫಿರಸ್ ಡ್ಯುಯೊ (2026) ಗೇಮಿಂಗ್ ಲ್ಯಾಪ್‌ಟಾಪ್ ಜೂನ್ ಅಂತ್ಯದ ವೇಳೆಗೆ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಈ ಲ್ಯಾಪ್‌ಟಾಪ್ ಬೆಲೆ ಸುಮಾರು 5,500 ಡಾಲರ್ (ಅಂದಾಜು 5,26,000 ರೂ.) ನಿಗದಿಯಾಗಿದೆ. ಭಾರತದಲ್ಲಿ ಆಮದು ಸುಂಕ ಹಾಗೂ ಇತರ ತೆರಿಗೆಗಳನ್ನು ಒಳಗೊಂಡಂತೆ ಇದರ ಬೆಲೆ ಸುಮಾರು 5,30,000 ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಅಸೂಸ್ ಇಂಡಿಯಾ ಅಧಿಕೃತವಾಗಿ ಬಿಡುಗಡೆಯ ದಿನಾಂಕ ಹಾಗೂ ನಿಖರ ಬೆಲೆಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.
ಆಕರ್ಷಕ ಡ್ಯುಯಲ್ ಸ್ಕ್ರೀನ್ ಹಾಗೂ ಡಿಸ್‌ಪ್ಲೇ
ಈ ಲ್ಯಾಪ್‌ಟಾಪ್‌ನ ಪ್ರಮುಖ ಆಕರ್ಷಣೆ ಎಂದರೆ ಇದರ ಡ್ಯುಯಲ್ ಸ್ಕ್ರೀನ್. ಇದು ಎರಡು 16-ಇಂಚಿನ ರಾಗ್ ನೆಬ್ಯುಲಾ (ROG Nebula) ಎಚ್‌ಡಿಆರ್ ಒಎಲ್‌ಇಡಿ (OLED) ಟಚ್‌ಸ್ಕ್ರೀನ್‌ಗಳನ್ನು ಹೊಂದಿದೆ. 3K ರೆಸಲ್ಯೂಶನ್ ಹಾಗೂ 16:10 ಅನುಪಾತವನ್ನು ಹೊಂದಿರುವ ಈ ಡಿಸ್‌ಪ್ಲೇಗಳು ಗೇಮಿಂಗ್ ಹಾಗೂ ಕಂಟೆಂಟ್ ಕ್ರಿಯೇಷನ್‌ಗೆ ಅತ್ಯುತ್ತಮ ವೀಕ್ಷಣಾ ಅನುಭವ ನೀಡಲಿವೆ. ಇದಲ್ಲದೆ 120Hz ರಿಫ್ರೆಶ್ ರೇಟ್, 1100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹಾಗೂ 100% DCI-P3 ಕಲರ್ ಗ್ಯಾಮಟ್ ಬೆಂಬಲದೊಂದಿಗೆ ಸ್ಕ್ರೀನ್ ಅತ್ಯಂತ ಸ್ಪಷ್ಟವಾಗಿ ಮೂಡಿಬರಲಿದೆ. ಈ ಡಿಸ್‌ಪ್ಲೇಯು ಟಚ್ ಇನ್‌ಪುಟ್ ಹಾಗೂ ಸ್ಟೈಲಸ್ ಪೆನ್ ಬಳಕೆಯನ್ನೂ ಸಹ ಬೆಂಬಲಿಸುತ್ತದೆ.
ಅತ್ಯಂತ ಶಕ್ತಿಶಾಲಿ ಪ್ರೊಸೆಸರ್ ಹಾಗೂ ಸ್ಟೋರೇಜ್
ಹಾರ್ಡ್‌ಕೋರ್ ಗೇಮರ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಈ ಲ್ಯಾಪ್‌ಟಾಪ್, ಅತ್ಯಾಧುನಿಕ ಇಂಟೆಲ್ ಕೋರ್ ಅಲ್ಟ್ರಾ 9 (386H) ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದರೊಂದಿಗೆ 50 ಟಾಪ್ಸ್ (TOPS) ಎಐ ಸಾಮರ್ಥ್ಯದ ಇಂಟೆಲ್ ಎನ್‌ಪಿಯು (NPU) ಒದಗಿಸಲಾಗಿದೆ. ಅತ್ಯುನ್ನತ ಗ್ರಾಫಿಕ್ಸ್ ಅನುಭವಕ್ಕಾಗಿ 24GB GDDR7 ವಿನ್ಯಾಸದ ಎನ್ವಿಡಿಯಾ ಜಿಫೋರ್ಸ್ (Nvidia GeForce) RTX 5090 ಲ್ಯಾಪ್‌ಟಾಪ್ ಜಿಪಿಯು (GPU) ಅನ್ನು ನೀಡಲಾಗಿದೆ. ಇನ್ನು ಮೆಮೊರಿ ವಿಚಾರಕ್ಕೆ ಬಂದರೆ, ಇದು 64GB LPDDR5x ರ್‍ಯಾಮ್ ಹಾಗೂ 2TB PCIe 5.0 ಎನ್‌ವಿಎಂಇ ಎಸ್‌ಎಸ್‌ಡಿ (SSD) ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ಯಾವುದೇ ಕಠಿಣ ಗೇಮ್‌ಗಳನ್ನು ಅಥವಾ ಭಾರಿ ತಂತ್ರಾಂಶಗಳನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದೆ.
ಬ್ಯಾಟರಿ ಹಾಗೂ ಇತರ ಕನೆಕ್ಟಿವಿಟಿ ಫೀಚರ್ಸ್
ಈ ಶಕ್ತಿಶಾಲಿ ಲ್ಯಾಪ್‌ಟಾಪ್‌ಗೆ ಪೂರಕವಾಗಿ 90Wh ಸಾಮರ್ಥ್ಯದ ಬ್ಯಾಟರಿ ಹಾಗೂ 250W ಅಡಾಪ್ಟರ್ ಅನ್ನು ಒದಗಿಸಲಾಗಿದೆ. ಅತ್ಯುತ್ತಮ ಆಡಿಯೋಗಾಗಿ ಲ್ಯಾಪ್‌ಟಾಪ್‌ನಲ್ಲಿ ಎರಡು ಟ್ವೀಟರ್ ಹಾಗೂ ನಾಲ್ಕು ವೂಫರ್ ಸೇರಿದಂತೆ ಒಟ್ಟು ಆರು ಸ್ಪೀಕರ್‌ಗಳ ಸೆಟ್‌ಅಪ್ ನೀಡಲಾಗಿದೆ. ಇನ್ನು ಕನೆಕ್ಟಿವಿಟಿ ವಿಚಾರದಲ್ಲಿ ಇದು ಅತ್ಯಾಧುನಿಕ ವೈ-ಫೈ 7 (Wi-Fi 7) ಹಾಗೂ ಬ್ಲೂಟೂತ್ 6.0 ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ವಿಂಡೋಸ್ 11 ಪ್ರೊ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸುವ ಈ ಲ್ಯಾಪ್‌ಟಾಪ್, ವಿಂಡೋಸ್ ಹಲೋ ಫೇಶಿಯಲ್ ರೆಕಗ್ನಿಷನ್ ಬೆಂಬಲಿಸುವ 1080p ಫುಲ್-ಎಚ್‌ಡಿ ಐಆರ್ (IR) ಕ್ಯಾಮೆರಾ ಮತ್ತು ಬ್ಯಾಕ್‌ಲಿಟ್ ವೈರ್‌ಲೆಸ್ ಕೀಬೋರ್ಡ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ : ಗ್ರಾಹಕರ ನೆಚ್ಚಿನ ಬೈಕ್ ಸ್ಪ್ಲೆಂಡರ್‌ಗೆ ಹೊಸ ಲುಕ್ : ಹೈಟೆಕ್ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ!



















