ಹಾಲಿನ ದರ ಏರಿಕೆಯ ಬೆನ್ನಲ್ಲೇ ಸಾರ್ವಜನಿಕರಿಗೆ ಗ್ರಾಹಕರಿಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದ್ದು, ಮೊಸರಿನ ಬೆಲೆಯಲ್ಲಿ ಭಾರಿ ಏರಿಕೆ ಮಾಡಲಾಗಿದೆ. ಇನ್ಮುಂದೆ ಒಂದು ಲೀಟರ್ ಮೊಸರಿನ ಬೆಲೆಯಲ್ಲಿ ಬರೋಬ್ಬರಿ 14 ರೂಪಾಯಿ ಹೆಚ್ಚಳವಾಗಲಿದೆ.
ಇದರಿಂದಾಗಿ ಈ ಮುಂಚೆ 54 ರೂಪಾಯಿ ಇದ್ದ ಒಂದು ಲೀಟರ್ ಮೊಸರಿನ ಬೆಲೆ ಇದೀಗ 68 ರೂಪಾಯಿಗೆ ತಲುಪಿದೆ. ಇನ್ನು ಅರ್ಧ ಲೀಟರ್ ಮೊಸರಿನ ಬೆಲೆಯಲ್ಲೂ 6 ರೂಪಾಯಿ ಹೆಚ್ಚಿಸಲಾಗಿದ್ದು, 500 ಗ್ರಾಂ ಮೊಸರಿನ ಪ್ಯಾಕೆಟ್ ಬೆಲೆ 34 ರೂಪಾಯಿಗೆ ಏರಿಕೆಯಾಗಿದೆ. ನಾಳೆಯಿಂದಲೇ ಈ ಪರಿಷ್ಕೃತ ದರಗಳು ಅಧಿಕೃತವಾಗಿ ಜಾರಿಗೆ ಬರಲಿವೆ ಎಂದು ಆದೇಶ ಹೊರಡಿಸಲಾಗಿದೆ.



















