ಬೆಂಗಳೂರು : ಬೆಂಗಳೂರಿನ ಘನತ್ಯಾಜ್ಯ ಸಾಗಾಣಿಕೆಗೆ ಸಂಬಂಧಿಸಿದ ಸುಮಾರು ₹250 ಕೋಟಿ ಮೌಲ್ಯದ ವಿವಿಧ ಟೆಂಡರ್‌ಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಪ್ರಕ್ರಿಯಾತ್ಮಕ ಲೋಪಗಳ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯ ಸರ್ಕಾರ ಹಾಗೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರಿಗೆ ದೂರು ನೀಡಿದ್ದಾರೆ. BSWML ಸಿಇಒ ಕರಿಗೌಡ (Bengaluru Solid Waste Management Limited) ಅವರ ಆಡಳಿತಾತ್ಮಕ ಪಾತ್ರ, ಟೆಂಡರ್‌ಗಳಿಗೆ ಸಂಬಂಧಿಸಿದ ನಿರ್ಧಾರಗಳು, ಅನುಮೋದನೆಗಳು, ಕಡತ ನಿರ್ವಹಣೆ ಹಾಗೂ ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನೂ ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
M/s Muniyappa Enterprises ಸೇರಿದಂತೆ ಸಂಬಂಧಿತ ಸಂಸ್ಥೆಗಳಿಗೆ ಟೆಂಡರ್‌ಗಳನ್ನು ನೀಡುವ ಸಂದರ್ಭದಲ್ಲಿ ಟೆಂಡರ್ ಅರ್ಹತೆ, ತಾಂತ್ರಿಕ ಮತ್ತು ಹಣಕಾಸು ಮೌಲ್ಯಮಾಪನ, KTPP ಕಾಯ್ದೆ ಮತ್ತು ನಿಯಮಗಳ ಪಾಲನೆ, L1 ನಿರ್ಧಾರ, EMD, Performance Security, ಕಾರ್ಯಾದೇಶ ಹಾಗೂ ಒಪ್ಪಂದ ನಿರ್ವಹಣೆ ನಿಯಮಾನುಸಾರ ನಡೆದಿದೆಯೇ ಎಂಬುದನ್ನು ಮೂಲ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಬೇಕೆಂದು ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.
ದೂರಿನಲ್ಲಿ, M/s Muniyappa Enterprises ಸೇರಿದಂತೆ ಸಂಬಂಧಿತ ಸಂಸ್ಥೆಗಳಿಗೆ ಸುಮಾರು ₹250 ಕೋಟಿ ಮೌಲ್ಯದ ಟೆಂಡರ್‌ಗಳು ಹಾಗೂ ಕಾರ್ಯಾದೇಶಗಳನ್ನು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಿದ್ದು, ಈ ಸಂಸ್ಥೆಗಳು ಟೆಂಡರ್ ಅಧಿಸೂಚನೆಯಲ್ಲಿ ನಿಗದಿಪಡಿಸಿದ್ದ ಅರ್ಹತಾ ಮಾನದಂಡಗಳನ್ನು ನಿಜವಾಗಿಯೂ ಪೂರೈಸಿವೆಯೇ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಕೋರಲಾಗಿದೆ. ಯಲಹಂಕ, ದಾಸರಹಳ್ಳಿ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರಂ, ಗಾಂಧಿನಗರ ಸೇರಿದಂತೆ ವಿವಿಧ ಪ್ರದೇಶಗಳ ಹಲವಾರು ಪ್ಯಾಕೇಜ್‌ಗಳನ್ನು ಒಂದೇ ಸಂಸ್ಥೆ ಅಥವಾ ಪರಸ್ಪರ ಸಂಬಂಧ ಹೊಂದಿರುವ ಸಂಸ್ಥೆಗಳಿಗೆ ನೀಡಲಾಗಿದೆಯೇ ಎಂಬುದನ್ನೂ ತನಿಖೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ತನಿಖೆಯ ನಿಷ್ಪಕ್ಷಪಾತತೆ ಹಾಗೂ ದಾಖಲೆಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಮೂಲ ಭೌತಿಕ ದಾಖಲೆಗಳು, e-Procurement ದಾಖಲೆಗಳು, audit trail ಹಾಗೂ ಇತರ ಡಿಜಿಟಲ್ ಸಾಕ್ಷ್ಯಗಳನ್ನು ತಕ್ಷಣ ಸಂರಕ್ಷಿಸಬೇಕು ಎಂದು ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ. ಅಲ್ಲದೆ, ತನಿಖೆಯ ವ್ಯಾಪ್ತಿಗೆ ಒಳಪಡುವ ಕರಿಗೌಡ ಅವರು ಸಂಬಂಧಿತ ಟೆಂಡರ್‌ಗಳು, ಕಡತಗಳು, ಗುತ್ತಿಗೆದಾರರು, ಪಾವತಿಗಳು ಅಥವಾ ಆಡಳಿತಾತ್ಮಕ ನಿರ್ಧಾರಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವ ಸಾಧ್ಯತೆ ಉಂಟಾಗದಂತೆ, ತನಿಖೆ ಪೂರ್ಣಗೊಳ್ಳುವವರೆಗೆ Solid Waste Management/Transport Tender/Contract Administrationಗೆ ಸಂಬಂಧಿಸಿದ ಜವಾಬ್ದಾರಿಯಿಂದ ಬೇರೆ ಕರ್ತವ್ಯಕ್ಕೆ ವರ್ಗಾಯಿಸುವಂತೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ ₹250 ಕೋಟಿ ಮೌಲ್ಯದ ಬೆಂಗಳೂರು ಘನತ್ಯಾಜ್ಯ ಸಾಗಾಣಿಕೆ ಟೆಂಡರ್‌ಗಳ ಹಂಚಿಕೆ, ಅರ್ಹತೆ, ತಾಂತ್ರಿಕ ಮತ್ತು ಹಣಕಾಸು ಮೌಲ್ಯಮಾಪನ, L1 ನಿರ್ಧಾರ, ಕಾರ್ಯಾದೇಶ, ಒಪ್ಪಂದ ನಿರ್ವಹಣೆ ಹಾಗೂ ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಸಮಗ್ರ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಯಾವುದೇ ಅಕ್ರಮ ಅಥವಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಸಕ್ಕರೆ ಆಯ್ತು, ಈಗ ಈರುಳ್ಳಿ ಬೆಲೆಯೂ ಏರಿಕೆ : ಗ್ರಾಹಕರ ಜೇಬಿಗೆ ಕತ್ತರಿ!


















