ಬೆಂಗಳೂರು : ಕೇಂದ್ರ ಸರ್ಕಾರದ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL Recruitment 2026) ಸಂಸ್ಥೆಯಲ್ಲಿ ಖಾಲಿ ಇರುವ 270 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿರುವವರಿಗೆ ಶುಭ ಸಮಾಚಾರ ಸಿಕ್ಕಂತಾಗಿದೆ. ಅದರಲ್ಲೂ, ಫ್ರೆಶರ್ ಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. ಹಾಗಾದರೆ, ಅರ್ಜಿ ಸಲ್ಲಿಸುವುದು ಹೇಗೆ? ಸಂಬಳ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL)
ಹುದ್ದೆಗಳು: 270
ಹುದ್ದೆ ಹೆಸರು: ಅಪ್ರೆಂಟಿಸ್
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಸೆಪ್ಟೆಂಬರ್ 10
ಉದ್ಯೋಗ ಸ್ಥಳ: ದೇಶಾದ್ಯಂತ
ಐಟಿಐ ಎಲೆಕ್ಟ್ರಿಶಿಯನ್, ಡಿಪ್ಲೋಮಾ ಅಪ್ರೆಂಟಿಸ್ ಹಾಗೂ ಗ್ರಾಜ್ಯುಯೇಟ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಿಂದ ಐಟಿಐ, ಡಿಪ್ಲೋಮಾ, ಬಿಎಸ್ಸಿ, ಬಿ.ಇ, ಬಿ.ಟೆಕ್, ಎಂಬಿಎ ಕೋರ್ಸ್ ಗಳನ್ನು ಮುಗಿಸಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 18 ವರ್ಷ ದಾಟಿದವರು ಅರ್ಜಿ ಸಲ್ಲಿಸಲು ಅರ್ಹರು. ನೇಮಕಾತಿ ಹೊಂದಿದವರಿಗೆ ಮಾಸಿಕ 17,500 ರೂ.ವರೆಗೆ ಸ್ಟೈಪೆಂಡ್ ನೀಡಲಾಗುತ್ತದೆ. ಮೆರಿಟ್ ಲಿಸ್ಟ್ ಹಾಗೂ ದಾಖಲೆ ಪರಿಶೀಲನೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ powergridindia.com ಗೆ ಭೇಟಿ ನೀಡಬೇಕು
ಅಪ್ರೆಂಟಿಸ್ ಹುದ್ದೆಗಳ ವಿಭಾಗವನ್ನು ಆಯ್ಕೆಮಾಡಿಕೊಳ್ಳಬೇಕು
ಹುದ್ದೆಗಳ ಕುರಿತ ಅಧಿಸೂಚನೆ ಓದಬೇಕು
ಆನ್ ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಬೇಕು
ಅರ್ಜಿ ನಮೂನೆಯನ್ನು ತಪ್ಪಿಲ್ಲದೆ ಭರ್ತಿ ಮಾಡಬೇಕು
ಆನ್ ಲೈನ್ ಮೂಲಕವೇ ಶುಲ್ಕ ಪಾವತಿ ಮಾಡಬೇಕು
ಅರ್ಜಿ ಸಲ್ಲಿಸಿ, ಸಬ್ ಮಿಟ್ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಬೇಕು
ಇದನ್ನೂ ಓದಿ : ಗಡಿ ಮೀರಿದ ಕ್ರೀಡಾ ಬಾಂಧವ್ಯ : ಇಮ್ರಾನ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಪಾಕ್ ಪ್ರಧಾನಿಗೆ 21 ದಿಗ್ಗಜರ ಮನವಿ



















