ಮಂಡ್ಯ: ಅಪ್ರಾಪ್ತ ಬಾಲಕಿ ಪ್ರೀತಿಸುತ್ತಿದ್ದ ಯುವಕ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ಈ ಹಿನ್ನೆಲೆಯಲ್ಲಿ ಯುವಕನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಮೀನು ಹಿಡಿಯಲು ಕೆರೆಗೆ ಬಳಿ ತೆರಳಿದ್ದ ಯುವಕ ಅನುಮಾನದಸ್ಪದವಾಗಿ ಸಾವನ್ನಪ್ಪಿದ್ದಾನೆ. ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ರಾಮಂದೂರು ಕೆರೆ ಹತ್ತಿರ ಈ ಘಟನೆ ನಡೆದಿದೆ.
ರಾಮನಾಥ ಮೋಳೆ ಗ್ರಾಮದ 21 ವರ್ಷದ ಮಂಜುನಾಥ್ ಸಾವನ್ನಪ್ಪಿರುವ ಯುವಕ. ಮಂಜುನಾಥ್ ಮೃತದೇಹ ಹಳ್ಳದಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಇದನ್ನು ಕಂಡ ಕುಟುಂಬಸ್ಥರು, ಮಗ ಅಪಘಾತದಲ್ಲಿ ಸತ್ತಿಲ್ಲ. ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮೃತ ಮಂಜುನಾಥ್ ತಂದೆ ಶಿವಸ್ವಾಮಿ ಜೊತೆ ಕೆರೆಗಳಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆತ ಅಪ್ರಾಪ್ತೆಯನ್ನ ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ. ಈಗ ಅಪ್ರಾಪ್ತೆಯ ಸಹೋದರನ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರ ತನಿಖೆಯ ನಂತರ ಸತ್ಯ ಹೊರಗೆ ಬರಬೇಕಿದೆ.



















