ಮಂಡ್ಯ : ಇಲ್ಲಿನ ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಗಂಜಾಮ್‌ನಲ್ಲಿ ಮುಸ್ಲಿಂ ಯುವಕನನನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.
ಬೈಕ್‌ನಲ್ಲಿ ಬಂದಿದ್ದ ನಾಲ್ಕೈದು ಜನರ ಗ್ಯಾಂಗ್, ಅಟ್ಟಾಡಿಸಿ ಲಾಂಗು ಮಚ್ಚುಗಳಿಂದ ಕೊಚ್ಚಿ 22 ವರ್ಷದ ಮೈಸೂರು ಮೂಲದ ಯೂಸುಫ್ ಎಂಬಾತನನ್ನ ಕೊ*ಲೆ ಮಾಡಿದೆ.
ಮರ್ಡರ್ ಬಳಿಕ ಮಾರಾಕಾಸ್ತ್ರ ಬಿಸಾಡಿ ಹಂತಕರು ಪರಾರಿ ಆಗಿದ್ದಾರೆ. ಸ್ಥಳಕ್ಕೆ ಎಸ್‌ಪಿ ಸೇರಿ ಶ್ರೀರಂಗಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿಯಲು ಮುಂದಾಗಿದ್ದಾರೆ.
ಇದನ್ನೂ ಓದಿ : ಬಾಗಲಕೋಟೆ ಬೈ ಎಲೆಕ್ಷನ್‌ನಲ್ಲಿ ಉಮೇಶ್ ಮೇಟಿಗೆ ಭರ್ಜರಿ ಗೆಲುವು – ‘ಕೈ’ ಕಾರ್ಯಕರ್ತರಿಂದ ಸಂಭ್ರಮಾಚರಣೆ



















