ಕೊಪ್ಪಳ: ಮೈಸೂರು ವಿಶ್ವವಿದ್ಯಾಲಯದಲ್ಲಿ ಕೊಪ್ಪಳ ಯುವಕನ ದಾಖಲೆಯ ಸಾಧನೆ ಮಾಡಿದ್ದು, ಒಂದೇ ಘಟಿಕೋತ್ಸವದಲ್ಲಿ ಬರೋಬ್ಬರಿ 13 ಚಿನ್ನದ ಪದಕಗಳನ್ನು ಗಳಿಸಿದ್ದಾನೆ.

ಚರಿತ್ರೆ ಸೃಷ್ಟಿಸಿದ ಕೊಪ್ಪಳದ ಕನಕಗಿರಿ ತಾಲೂಕಿನ ಕನ್ನೇರುಮಡಿನ ಎಂ.ಎ.ಕನ್ನಡ ವಿದ್ಯಾರ್ಥಿ ಚಂದ್ರಶೇಖರ 106ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳ ಜೊತೆ 4 ಪ್ರತಿಷ್ಠಿತ ನಗದು ಬಹುಮಾನಗಳನ್ನೂ ತಮ್ಮದಾಗಿಸಿಕೊಂಡಿದ್ದು, ಒಟ್ಟು 17 ಬಹುಮಾನಗಳನ್ನು ಪಡೆದ ಎಕೈಕ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ (KIKS) ವಿದ್ಯಾರ್ಥಿಯ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಕನ್ನಡ ವಿಷಯದಲ್ಲಿ ಈ ಮಟ್ಟದ ಪ್ರಶಸ್ತಿ ಗಳಿಸಿ ಯುವ ಪೀಳಿಗೆಗೆ ಪ್ರೇರಣೆಯಾದ ವಿದ್ಯಾರ್ಥಿ ಚಂದ್ರಶೇಖರ ಸಾಧನೆಗೆ ಸೋಷಿಯಲ್ ಮಿಡಿಯಾದಲ್ಲಿ ಪ್ರಶಂಸೆಯ ಸುರಿಮಳೆಯೆ ಹರಿದು ಬಂದಿದೆ.
ಇದನ್ನೂ ಓದಿ: ವಿಜಯಪುರದಲ್ಲಿ ವೃಕ್ಷೋತಾನ್ ಮ್ಯಾರಥಾನ್‌ಗೆ ಚಾಲನೆ | ದೇಶದ ವಿವಿಧೆಡೆಯಿಂದ ಪಾಲ್ಗೊಂಡ ಕ್ರೀಡಾಪಟುಗಳು



















