ಬೆಂಗಳೂರು: ರಾಜ್ಯ ಸರ್ಕಾರ ಇಂದು (ನವೆಂಬರ್ 18) ತಕ್ಷಣದಿಂದ ಜಾರಿಗೆ ಬರುವಂತೆ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿದಂತೆ ಒಟ್ಟು 34 ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನಲ್ಲಿ ಐದು ಕಮಿಷನರೇಟ್‌ಗಳ ರಚನೆ
ಜಿಬಿಎ (GBA) ಮಾದರಿಯಲ್ಲಿ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಐದು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಬೆಂಗಳೂರು ನಗರ ಎಂದು ಹೊಸ ಕಮಿಷನರೇಟ್ ಹುದ್ದೆಗಳನ್ನು ಸೃಷ್ಟಿಸಲಾಗಿದ್ದು, ಎಲ್ಲಾ ವಿಭಾಗಗಳಿಗೂ ನೂತನ ಆಯುಕ್ತರನ್ನು ನೇಮಿಸಲಾಗಿದೆ.
ನೂತನ ಮುಖ್ಯ ಆಯುಕ್ತರಾಗಿ ಆರ್. ಹಿತೇಂದ್ರ
ಸೀಮಾಂತ್ ಕುಮಾರ್ ಸಿಂಗ್ ಅವರ ನಿರ್ಗಮನದಿಂದ ತೆರವಾಗಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸ್ಥಾನಕ್ಕೆ ಹಾಗೂ ನೂತನ ಕಮಿಷನರೇಟ್ ವ್ಯವಸ್ಥೆಯ ಮುಖ್ಯಸ್ಥರಾಗಿ 1996ನೇ ಬ್ಯಾಚ್‌ನ ಆರ್. ಹಿತೇಂದ್ರ ನೇಮಕಗೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಇವರು, ಇನ್ನು ಮುಂದೆ ಬೆಂಗಳೂರು ನಗರದ ಎಡಿಜಿಪಿ ಹಾಗೂ ಮುಖ್ಯ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಬೆಂಗಳೂರಿನ ಐದು ವಿಭಾಗಗಳ ನೂತನ ಪೊಲೀಸ್ ಕಮಿಷನರ್‌ಗಳು
ಕೇಂದ್ರ ಬೆಂಗಳೂರು ನಗರ: ಲಭು ರಾಮ್
ಪೂರ್ವ ಬೆಂಗಳೂರು ನಗರ: ಡಾ. ಪಿ.ಎಸ್. ಹರ್ಷ
ಪಶ್ಚಿಮ ಬೆಂಗಳೂರು ನಗರ: ವಿಕಾಶ್ ಕುಮಾರ್ ವಿಕಾಶ್
ಉತ್ತರ ಬೆಂಗಳೂರು ನಗರ: ಡಾ. ಎಂ.ಬಿ. ಬೋರಲಿಂಗಯ್ಯ
ದಕ್ಷಿಣ ಬೆಂಗಳೂರು ನಗರ: ಸಿ. ವಂಶಿ ಕೃಷ್ಣ
ಹೇಮಂತ್ ನಿಂಬಾಳ್ಕರ್‌ಗೆ ಸಂಚಾರ ಮತ್ತು ರೌಡಿ ನಿಗ್ರಹ ದಳದ ಹೊಣೆ
ಸ್ಥಳ ನಿರೀಕ್ಷೆಯಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಎಂ. ನಿಂಬಾಳ್ಕರ್ ಅವರನ್ನು ಬೆಂಗಳೂರು ನಗರ (ಸಂಚಾರ) ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿದೆ. ಇದರೊಂದಿಗೆ, ಮೇಲ್ದರ್ಜೆಗೇರಿಸಲಾದ ರೌಡಿ ನಿಗ್ರಹ ದಳದ (Anti-Rowdy Squad) ಆಯುಕ್ತರ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಲಾಗಿದೆ. ಇವರು ಮುಖ್ಯ ಆಯುಕ್ತರ ಅಡಿಯಲ್ಲಿ ಅಪರಾಧ ನಿಯಂತ್ರಣದ ಮೇಲ್ವಿಚಾರಣೆ ನಡೆಸಲಿದ್ದಾರೆ.
ಪ್ರಮುಖ ಹಿರಿಯ ಅಧಿಕಾರಿಗಳ ವರ್ಗಾವಣೆ ಪಟ್ಟಿ
ಬಿಜಯ್ ಕುಮಾರ್ ಸಿಂಗ್: ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ (ಆರ್. ಹಿತೇಂದ್ರ ಅವರ ಸ್ಥಾನಕ್ಕೆ)
ಎಸ್. ಮುರುಗನ್: ಎಡಿಜಿಪಿ, ಲೋಕಾಯುಕ್ತ
ಮನೀಶ್ ಖರ್ಬೀಕರ್: ಎಡಿಜಿಪಿ, ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ, ಬೆಂಗಳೂರು
ಎನ್. ಶಶಿ ಕುಮಾರ್: ಐಜಿಪಿ, ಪಶ್ಚಿಮ ವಲಯ, ಮಂಗಳೂರು
ಅನುಪಮ್ ಅಗ್ರವಾಲ್: ಐಜಿಪಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP)
ಡಾ. ಶರಣಪ್ಪ ಎಸ್.ಡಿ: ಡಿಐಜಿ, ರೈಲ್ವೆ
ಕುಲದೀಪ್ ಕುಮಾರ್ ಆರ್. ಜೈನ್: ಡಿಐಜಿ ಮತ್ತು ಪೊಲೀಸ್ ಆಯುಕ್ತರು, ಕಲಬುರಗಿ ನಗರ
ಎಂ. ಪುಟ್ಟಮಾದಯ್ಯ: ಡಿಐಜಿ, ದಕ್ಷಿಣ ವಲಯ, ಮೈಸೂರು
ಡಾ. ಎಂ. ಅಶ್ವಿನಿ: ಡಿಐಜಿ, ನೇಮಕಾತಿ ವಿಭಾಗ, ಬೆಂಗಳೂರು
ಜೆ.ಕೆ. ರಶ್ಮಿ: ಡಿಐಜಿ, ವಿಜಿಲೆನ್ಸ್, ಜಲಸಂಪನ್ಮೂಲ ಇಲಾಖೆ
ಬೆಂಗಳೂರಿನ ವಿವಿಧ ವಲಯಗಳ ಡಿಸಿಪಿ ಹಾಗೂ ಎಸ್‌ಪಿಗಳ ವರ್ಗಾವಣೆ ವಿವರ:
ಡಾ. ಅನೂಪ್ ಎ. ಶೆಟ್ಟಿ: ಡಿಸಿಪಿ (ಸಂಚಾರ), ಪೂರ್ವ ಬೆಂಗಳೂರು ನಗರ
ಲಕ್ಷ್ಮಣ್ ನಿಂಬರಗಿ: ಡಿಸಿಪಿ, ಸಿಎಆರ್ (CAR – ಕೇಂದ್ರ ಕಚೇರಿ), ಕೇಂದ್ರ ಬೆಂಗಳೂರು ನಗರ
ಚನ್ನಬಸವಣ್ಣ ಲಂಗೋಟಿ: ಡಿಸಿಪಿ, ಇಂದಿರಾನಗರ, ಕೇಂದ್ರ ಬೆಂಗಳೂರು ನಗರ
ನಾಗೇಶ್ ಡಿ.ಎಲ್: ಡಿಸಿಪಿ, ಯಶವಂತಪುರ, ಉತ್ತರ ಬೆಂಗಳೂರು ನಗರ
ಲೋಕೇಶ್ ಭರಮಪ್ಪ ಜಗಲಾಸರ್: ಡಿಸಿಪಿ (ಸಂಚಾರ), ಕೇಂದ್ರ ಬೆಂಗಳೂರು ನಗರ
ಯತೀಶ್ ಎನ್: ಡಿಸಿಪಿ, ಕೆಂಗೇರಿ (ನೈಋತ್ಯ), ಪಶ್ಚಿಮ ಬೆಂಗಳೂರು ನಗರ
• ಸೈದುಲು ಅಡಾವತ್: ಎಸ್‌ಪಿ, ಆಂತರಿಕ ಭದ್ರತಾ ವಿಭಾಗ (ISD), ಬೆಂಗಳೂರು
• ಶ್ರೀಹರಿ ಬಾಬು ಬಿ.ಎಲ್: ಡಿಸಿಪಿ, ವೈಟ್‌ಫೀಲ್ಡ್, ಪೂರ್ವ ಬೆಂಗಳೂರು ನಗರ
• ಡಾ. ಗೀತಾ ಎಂ.ಎಸ್: ಡಿಸಿಪಿ, ಪೂರ್ವ ಬೆಂಗಳೂರು ನಗರ
• ರಂಜಿತ್ ಕುಮಾರ್ ಬಂಡಾರು: ಡಿಸಿಪಿ (ಆಡಳಿತ), ಬೆಂಗಳೂರು ನಗರ
• ಅಶೋಕ್ ಕೆ.ವಿ: ಡಿಸಿಪಿ, ಪೀಣ್ಯ, ಪಶ್ಚಿಮ ಬೆಂಗಳೂರು ನಗರ
• ಅಮತೆ ವಿಕ್ರಮ್: ಡಿಸಿಪಿ, ಉತ್ತರ ಬೆಂಗಳೂರು ನಗರ
• ಲಕ್ಷ್ಮಿ ಗಣೇಶ್ ಕೆ: ಡಿಸಿಪಿ, ಗಾಂಧಿನಗರ, ಕೇಂದ್ರ ಬೆಂಗಳೂರು ನಗರ
• ಪಿ.ವಿ. ಸ್ನೇಹಾ: ಡಿಸಿಪಿ (ಸಂಚಾರ), ಪಶ್ಚಿಮ ಬೆಂಗಳೂರು ನಗರ


















