ಚಿಕ್ಕಮಗಳೂರು : ಚಲಿಸುತ್ತಿದ್ದ ಕಾರಿನ ಮುಂಭಾಗ ಬೃಹತ್ ಮರವೊಂದು ಬಿದ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಬಳಿ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಏ.24ರ ಸಂಜೆ ಆಲ್ದೂರಿನಲ್ಲಿ ಭಾರೀ ಮಳೆ (Rain) ಸುರಿಯುತ್ತಿತ್ತು. ಈ ವೇಳೆ ಕಾರಿನಲ್ಲಿ ಹಾಸನ ಮೂಲದ ನಾಲ್ವರು ಪ್ರಯಾಣಿಸುತ್ತಿದ್ದರು. ಈ ವೇಳೆ ಮರ ಬಿದ್ದಿದೆ. ಮರ ಬೀಳುವ ದೃಶ್ಯ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮರ ಬೀಳುತ್ತಿದ್ದಂತೆ ಚಾಲಕ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಿಲ್ಲಿಸಿದ್ದಾನೆ. ಇದರಿಂದ ಪ್ರಯಾಣಿಕರು ಪಾರಾಗಿದ್ದಾರೆ.
ಇದನ್ನೂ ಓದಿ : ನಾಸಿಕ್ TCS ಮತಾಂತರ ಕೇಸ್ : ಮಂಪರು ತರಿಸುವ ಶೀರ್ ಕುರ್ಮಾ, ಫೇಸ್ ಐಡಿಯಿಂದ ಬಯಲಾಯ್ತು ಸ್ಫೋಟಕ ಸತ್ಯ!



















