ಬೀದರ್: ಜಿಲ್ಲೆಯ ಹುಲಸೂರು ತಾಲ್ಲೂಕಿನ ಮುಚಳಂಬ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಎರ್ಟಿಗಾ ವಾಹನವು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬಾಲಕ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸವಕಲ್ಯಾಣ ನಗರದ ಲಾಲ್ ತಲಾಬ್ ನಿವಾಸಿ 26 ವರ್ಷದ ಬಾಬಾ, ಶಹಾಪೂರ ಗಲ್ಲಿ ನಿವಾಸಿ 22 ವರ್ಷದ ಸುಮೀರ್ ಮತ್ತು ಶಾಹುಸೇನ್ ಗಲ್ಲಿ ನಿವಾಸಿ 12 ವರ್ಷದ ರೆಹಾನ್ ಮೃತ ದುರ್ದೈವಿಗಳು.
ಇವರೆಲ್ಲರೂ ಮುಚಳಂಬ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ತೊಟ್ಟಿಲು ಆಟ ಆಡಿಸಿ ಒಂದೇ ಬೈಕ್ನಲ್ಲಿ ವಾಪಸ್ ಬಸವಕಲ್ಯಾಣಕ್ಕೆ ಬರುತ್ತಿದ್ದು, ಈ ವೇಳೆ ಎರ್ಟಿಗಾ ವಾಹನ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.


















