ಆಸ್ತಿ ಮೇಲಿನ ಆಸೆ ಮತ್ತು ಹೆಂಡತಿ ಮೇಲಿನ ದ್ವೇಷವೇ ಈ ಸರಣಿ ಹತ್ಯೆಗೆ ಕಾರಣ ಎಂಬುದನ್ನು ಸೈಕೋಪಾಥ್ ಹೇಳಿದ್ದಾನೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 20 ವರ್ಷಗಳ ದಾಂಪತ್ಯ ಜೀವನ ಕೇವಲ 20 ದಿನಗಳಲ್ಲಿ ಅಂತ್ಯಗೊಂಡಿದೆ.
ಪತ್ನಿ ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದಳು ಎಂದು ಪಾಪಿ ಶೇಖರ್ ಆರೋಪಿಸಿದ್ದಾನೆ. ಯಾವುದೇ ಪ್ರಯೋಜನಕ್ಕೆ ಬಾರದವನು ಎಂದು ಪತ್ನಿ ಹಾಗೂ ಇತರರು ಹೀಯಾಳಿಸುತ್ತಿದ್ದರು ಎಂದು ಹೇಳಿದ್ದಾನೆ. ತಮ್ಮ ಕುಟುಂಬದವರೆಲ್ಲ ತನ್ನ ವಿರೋಧಿಗಳೆಂದು ಆರೋಪಿ ತನ್ನ ಅಪ್ರಾಪ್ತ ಮಗಳ ತಲೆಗೆ ತುಂಬಿದ್ದನು. ಮಗಳ ಬ್ರೈನ್ ವಾಶ್ ಮಾಡಿ ಈ ಕೃತ್ಯಕ್ಕೆ ಬಳಸಿಕೊಂಡಿರುವುದು ತನಿಖೆಯಿಂದ ಬಯಲಾಗಿದೆ.
















