ಹೊಸಪೇಟೆಯ ಆರ್ಬಿಎಸ್ಎಸ್ಎನ್ ಕಂಪನಿಗೆ ವಿರೋಧದ ನಡುವೆಯೂ 3 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ 64 ಎಕರೆ ಸರ್ಕಾರಿ ಜಮೀನನ್ನು 30ವರ್ಷಗಳ ಅವಧಿಗೆ ಕನಿಷ್ಠ ದರಕ್ಕೆ ಗುತ್ತಿಗೆ ನೀಡಿರುವುದರ ವಿರುದ್ಧ ಮಾಜಿ ಸಚಿವ ಆನಂದ್ ಸಿಂಗ್ ಭಾರಿ ಆಕ್ರೋಶ ಹೊರಹಾಕಿದ್ದಾರೆ.
ಅಕ್ಟೋಬರ್ 6 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದ್ದು, ಇದರಿಂದ ಸರ್ಕಾರಕ್ಕೆ 3 ಸಾವಿರ ಕೋಟಿ ರೂ. ಗೂ ಅಧಿಕ ನಷ್ಟವಾಗಿದೆ ಎಂದು ಆನಂದ್ ಸಿಂಗ್ ಆರೋಪಿಸಿದ್ದಾರೆ.



















