ಹೊಸಪೇಟೆ ಬಳಿಯ ಗಣಿ ಕ್ಯಾಂಪ್‌ಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿದ್ದಾರೆ. ಕ್ಯಾಂಪ್‌ಗಳಲ್ಲಿನ ಮಹಿಳೆಯರ ಸ್ಥಿತಿಗತಿ ಕಂಡು ಮರುಗಿದ ಅಧ್ಯಕ್ಷರು, ಮನೆ ನಿರ್ಮಿಸಿಕೊಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಸಂತ್ರಸ್ತ ಮಹಿಳೆಯರಿಗೆ ಸದ್ಯದಲ್ಲೇ ಮನೆ ನಿರ್ಮಾಣ ಆಗುವುದಾಗಿ ನಾಗಲಕ್ಷ್ಮಿ ಚೌಧರಿ ಭರವಸೆ ನೀಡಿದ್ದಾರೆ.


















