ಬಸ್ ಪ್ರಯಾಣ ಹಾಗೂ ಹಾಲಿನ ದರ ಏರಿಕೆಯ ಬೆನ್ನಲ್ಲೇ ಸಾರ್ವಜನಿಕರಿಗೆ ಸರ್ಕಾರದಿಂದ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಆಟೋ ಎಲ್ಪಿಜಿ ದರದಲ್ಲಿ ಲೀಟರ್ಗೆ 4 ರೂಪಾಯಿ 3 ಪೈಸೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಈ ಹಿಂದೆ 74 ರೂಪಾಯಿ 65 ಪೈಸೆ ಇದ್ದ ಎಲ್ಪಿಜಿ ದರ ಸದ್ಯ 78 ರೂಪಾಯಿ 68 ಪೈಸೆ ತಲುಪಿದೆ.
ಈ ಏಕಾಏಕಿ ಏರಿಕೆಯಿಂದಾಗಿ ಆಟೋ ಚಾಲಕರಿಗೆ ಭಾರಿ ಆರ್ಥಿಕ ಹೊರೆ ಉಂಟಾಗಿದೆ. ಆದರೆ ಆಟೋ ಕನಿಷ್ಠ ಮೀಟರ್ ದರ ಮಾತ್ರ ಇನ್ನೂ 36 ರೂಪಾಯಿಗಳಲ್ಲೇ ಉಳಿದಿದ್ದು, ದರ ಏರಿಕೆಗೆ ತಕ್ಕಂತೆ ಕನಿಷ್ಠ ಮೀಟರ್ ದರವನ್ನು 60 ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಆಟೋ ಚಾಲಕರು ತೀವ್ರ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.


















