ಕಂಪ್ಲಿ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಬಾಬುಗೆ ದೊಡ್ಡ ಸಂಕಷ್ಟ ಎದುರಾಗಿದ್ದು, ಬಿಹಾರದ ಈಸ್ಟ್ ಚಂಪಾರಣ್ ಕೋರ್ಟ್ನಿಂದ ನಾನ್ ಬೇಲೇಬಲ್ ವಾರೆಂಟ್ ಜಾರಿಯಾಗಿದೆ.ಸುರೇಶ್ ಬಾಬು ಬಂಧನಕ್ಕಾಗಿ ಬಿಹಾರ ಪೊಲೀಸರ ತಂಡ ಬಳ್ಳಾರಿಗೆ ಬಂದಿದೆ. ಮಾಜಿ ಶಾಸಕರ ಬಂಧನಕ್ಕೆ ಬಿಹಾರ ಪೊಲೀಸರು ಬಳ್ಳಾರಿ ಎಸ್ಪಿ ಅವರ ಸಹಕಾರ ಕೋರಿದ್ದಾರೆ. ಬಳ್ಳಾರಿ ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ.
ಯಾವ ಪ್ರಕರಣ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಈ ಬೆಳವಣಿಗೆ ಭಾರೀ ಕುತೂಹಲ ಕೆರಳಿಸಿದೆ. ಸದ್ಯ ಮಾಜಿ ಶಾಸಕ ಸುರೇಶ್ ಬಾಬು ಬಂಧನ ಭೀತಿಯಲ್ಲಿದ್ದಾರೆ.



















