ಧನ್ವೀರ್ ಗೆ ನಟ ದರ್ಶನ್ ವೈಯಕ್ತಿಕ ಜೀವನಕ್ಕೆ ತಲೆ ಹಾಕದಂತೆ ‘ಡಿ’ ಕಂಪೆನಿ ಫೇಸ್ಬುಕ್ನಲ್ಲಿ ಅಧಿಕೃತ ಪೋಸ್ಟ್ ಮೂಲಕ ಹೊಸ ಎಚ್ಚರಿಕೆ ನೀಡಿದೆ. ಸುಳ್ಳು ಕಥೆಗಳನ್ನ ನಾವು ಸಹಿಸುವುದಿಲ್ಲ ಎಂದು ತಿಳಿಸಲಾಗಿದೆ.
ಕೋರ್ಟ್ ಮಧ್ಯಂತರ ತಡೆಯಾಜ್ಞೆ ಆದೇಶಿಸಿದ್ದು, ಪರಿಶೀಲಿಸದ ಆರೋಪಗಳನ್ನ ಹಂಚಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ದರ್ಶನ್ ವೈವಾಹಿಕ ಜೀವನದ ಬಗ್ಗೆಯೂ ಯಾರೂ ಮಾತನಾಡಬಾರದು ಎಂದು ಎಚ್ಚರಿಸಲಾಗಿದೆ. ಈ ಮೂಲಕ ‘ಮೂರನೇ ವ್ಯಕ್ತಿ’ಗಳಿಗೆ ಡಿ ಕಂಪೆನಿ ಮಾರ್ಮಿಕ ಸಾಲುಗಳ ಮೂಲಕ ಖಡಕ್ ಸಂದೇಶ ರವಾನಿಸಿದೆ


















