ಕೇಂದ್ರ ಸಚಿವ ಕುಮಾರಸ್ವಾಮಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ನಿಮ್ಮ ಕುರ್ಚಿಗೆ ಗೌರವ ಕೊಡೋದನ್ನ ಕಲಿತುಕೊಳ್ಳಿ ಎಂದಿದ್ದಾರೆ.ಕುಮಾರಸ್ವಾಮಿಯನ್ನು ‘ನಿರುದ್ಯೋಗಿ ಸಚಿವರು’ ಎಂದು ಜರಿದಿರುವ ಪ್ರಿಯಾಂಕ್ ಖರ್ಗೆ, ಅವರಿಗೆ ಕೆಲಸ ಇಲ್ಲ ಅಂದ್ರೆ ನಮಗೆ ಕೆಲಸ ಇಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಕುಮಾರಸ್ವಾಮಿ ಮನೆ ಮಹಜರು ಮಾಡಿದ ವಿಚಾರವಾಗಿ ಮಾತನಾಡಿ, ತನಿಖೆ ಪ್ರಗತಿಯಲ್ಲಿದೆ ಎಂದಷ್ಟೇ ಉತ್ತರಿಸಿದ್ದಾರೆ. ತನಿಖೆ ಗೌಪ್ಯವಾಗಿಡಬೇಕು ಎಂಬ ಕಾರಣಕ್ಕಾಗಿ ಕೆಲವು ಹೆಸರುಗಳನ್ನು ಉಲ್ಲೇಖಿಸಿಲ್ಲ ಎಂದಿದ್ದಾರೆ


















