ವಿಶ್ವಸಿನಿಮಾ ಅಡ್ಡಾದಲ್ಲಿ ಇದೀಗ ಯಶ್ ‘ರಾಮಾಯಣ’ ಚಿತ್ರದ ಹವಾ ಶುರುವಾಗಿದ್ದು, ಮುಂಗಡ ಬುಕಿಂಗ್ನಲ್ಲಿ ಚಿತ್ರ ದಾಖಲೆಯ ರಣಕಹಳೆ ಮೊಳಗಿಸಿದೆ. ಬಿಡುಗಡೆಗೂ ಮುನ್ನವೇ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಧೂಳೀಪಟವಾಗಿದ್ದು, ಬರೋಬ್ಬರಿ 50 ಕೋಟಿ ರೂಪಾಯಿಗಳನ್ನು ಮೊದಲೇ ಬಾಚಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಭರ್ಜರಿ ಕಲೆಕ್ಷನ್ನಿಂದಾಗಿ ಚಿತ್ರ ಬಿಡುಗಡೆಗೂ ಮುಂಚೆಯೇ ರಾಕಿಂಗ್ ಸ್ಟಾರ್ ಯಶ್ ಸಂಪೂರ್ಣ ಸೇಫ್ ಆಗಿದ್ದಾರೆ.
ಚಿತ್ರದಲ್ಲಿ ನಟನೆಯ ಜೊತೆಗೆ ನಿರ್ಮಾಣದಲ್ಲೂ ಯಶ್ ಸಾಥ್ ನೀಡಿದ್ದು, ಸದ್ಯ ಇಡೀ ಉತ್ತರ ಭಾರತದಲ್ಲೂ ‘ರಾಮಾಯಣ’ ಜ್ವರ ತೀವ್ರವಾಗಿ ಭುಗಿಲೆದ್ದಿದೆ. ಚಿತ್ರದಲ್ಲಿ ಯಶ್ ರಾವಣನಾಗಿ ಜಬರ್ದಸ್ತ್ ಎಂಟ್ರಿ ಕೊಡುತ್ತಿದ್ದು, ಇದೇ ನವೆಂಬರ್ 5ರಂದು ‘ರಾಮಾಯಣ’ ಸಿನಿಮಾ ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಲಿದೆ.



















