ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಭಕ್ತಿಪೂರ್ವಕ ನಮನ ಸಲ್ಲಿಸಲಾಗುತ್ತಿದೆ. ಹೊಸಪೇಟೆಯ ಪ್ರಮುಖ ಕೇಂದ್ರವಾದ ಅಪ್ಪು ಸರ್ಕಲ್ನಲ್ಲಿ ಅಭಿಮಾನಿಗಳು ಅಪ್ಪು ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ನೆಚ್ಚಿನ ನಟನನ್ನು ಕಣ್ಣೀರು ತುಂಬಿದ ಕಣ್ಣುಗಳಿಂದ ಸ್ಮರಿಸುತ್ತಿದ್ದಾರೆ.
ಕೇವಲ ನಗರದ ಜನ ಅಷ್ಟೇ ಅಲ್ಲದೆ, ಪಕ್ಕದ ನೂರಾರು ಹಳ್ಳಿಗಳಿಂದ ಅಭಿಮಾನಿಗಳ ದಂಡೇ ಅಪ್ಪು ಸರ್ಕಲ್ಗೆ ಹರಿದುಬರುತ್ತಿದೆ. ನೆಚ್ಚಿನ ಅರಸನ ನೆನಪಿಗಾಗಿ ನೂರಾರು ಜನರು ಅಪ್ಪು ಭಾವಚಿತ್ರದ ಪಕ್ಕದಲ್ಲಿ ನಿಂತು ಭಾವುಕರಾಗಿ ಫೋಟೋ ತೆಗೆದುಕೊಳ್ಳುತ್ತಿದ್ದು, ಇಡೀ ಹೊಸಪೇಟೆಯಲ್ಲಿ ಅಪ್ಪು ನಾಮಸ್ಮರಣೆ ಪ್ರತಿಧ್ವನಿಸುತ್ತಿದೆ.


















