ಶಿವಮೊಗ್ಗದ ಹೊರವಲಯದ ಗೋವಿಂದಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ಬಡವರಿಗಾಗಿ ಮನೆಗಳನ್ನು ನಿರ್ಮಿಸಿ ಎರಡು ವರ್ಷಗಳಾಗಿದ್ದರೂ ಬಡವರಿಗೆ ಮನೆಗಳ ಕೀಲಿಕೈ ಸಿಕ್ಕಿಲ್ಲ. ಹಣ ಕಟ್ಟಿ ಹಲವು ವರ್ಷ ಕಳೆದರೂ ಬಡವರಿಗೆ ಮನೆಗಳು ವಿತರಣೆಯಾಗದ ಕಾರಣ ಮತ್ತು ಸಾಲ ಮಾಡಿದ್ದ ಬಡವರ್ಗಕ್ಕೆ ಮನೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.
ರಾಷ್ಟ್ರಭಕ್ತರ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ನೇತೃತ್ವದಲ್ಲಿ ಈ ಪ್ರತಿಭಟನೆ ಆಯೋಜನೆಯಾಗಿದ್ದು, ಪ್ರತಿಭಟನಾಕಾರರು ಶಿವಮೊಗ್ಗ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಿದ್ದಾರೆ. ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಮಹಾನಗರ ಪಾಲಿಕೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.


















