ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 59ನೇ ಸೆಷನ್ಸ್ ಕೋರ್ಟ್ನಲ್ಲಿ ಮಹತ್ವದ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಯಲಿದೆ. ಘಟನೆಯ ವೇಳೆ ಪಟ್ಟಣಗೆರೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಕೊಲೆಯನ್ನು ಕಣ್ಣಾರೆ ಕಂಡಿದ್ದ ಹೈ ವಿಟ್ನೆಸ್ಗಳಾದ ಪುನೀತ್ ಮತ್ತು ಕಿರಣ್ ಇಂದು ಸಾಕ್ಷಿ ನುಡಿಯಲಿದ್ದಾರೆ. ಕೋರ್ಟ್ ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಹಾಜರಾಗಲಿದ್ದಾರೆ. ಈ ಹೈ ವಿಟ್ನೆಸ್ಗಳ ಸಾಕ್ಷಿ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.



















