ಲಾರೆನ್ಸ್ ಬಿಷ್ಣೋಯ್ ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯಲ್ಲಿ ಜನಿಸಿದ್ದಾನೆ. ಈತ ಅತ್ಯಂತ ಸುಸಂಸ್ಕೃತ ಹಾಗೂ ಶ್ರೀಮಂತ ಕುಟುಂಬದಲ್ಲಿ ಜನಿಸಿದವನಾಗಿದ್ದಾನೆ. ಬಿಷ್ಣೋಯ್ ತಂದೆ ಮಾಜಿ ಪೊಲೀಸ್ ಪೇದೆಯಾಗಿದ್ದು, ಸಿಎಂ ಪದಕ ಪಡೆದವರಾಗಿದ್ದಾರೆ. ಬಿಷ್ಣೋಯ್ ಚಂಡೀಗಢದ ಡಿಎವಿ ಕಾಲೇಜಿನಲ್ಲಿ ತನ್ನ ಶಿಕ್ಷಣವನ್ನು ಪೂರೈಸಿದ್ದಾನೆ.
ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡುವ ಅವಧಿಯಲ್ಲಿ ಈತ ರಾಜಕೀಯ ಪ್ರವೇಶ ಮಾಡಿದ್ದನು. ಆದರೆ ಕಾಲೇಜು ಚುನಾವಣೆಯಲ್ಲಿ ಸೋಲು ಕಂಡ ನಂತರ ಕ್ರೈಂ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ. ತದನಂತರ ಈತನಿಗೆ ಕೆನಡಾದಲ್ಲಿ ಕ್ರೈಂ ಲೋಕದ ದೊಡ್ಡ ಸಂಪರ್ಕ ಬೆಳೆಯಿತು. ಇದೇ ವೇಳೆ ಕೆನಡಾದಲ್ಲಿ ನೆಲೆಸಿರುವ ಕುಖ್ಯಾತ ದರೋಡೆಕೋರ ಗೋಲ್ಡಿ ಬ್ರಾರ್ ಪರಿಚಯ ಈತನಿಗೆ ಆಯಿತು.


















