ಆಧಾರ್ ಕಾರ್ಡಿನಲ್ಲಿ ಹೆಸರು ಬದಲಾವಣೆ, ಕಾಗುಣಿತ ತಿದ್ದುಪಡಿ, ಮದುವೆಯ ನಂತರದ ಬದಲಾವಣೆಗಳು ಮತ್ತು ಇತರೆ ಮಾರ್ಪಾಡುಗಳಿಗೆ ಸಂಬಂಧಿಸಿದಂತೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೆಸರು ತಿದ್ದುಪಡಿ ಸೇರಿ ಹಲವು ತಿದ್ದುಪಡಿಗಳಿಗೆ ಹೊಸ ಮಾರ್ಗಸೂಚಿಗಳನ್ನೂ ಹೊರಡಿಸಿದೆ. ಯಾವೆಲ್ಲ ನಿಯಮಗಳು ಜಾರಿಗೆ ಬಂದಿವೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
- ಆಧಾರ್ ನಲ್ಲಿ ಹೆಸರು ಬದಲಾವಣೆಗೆ ಮಿತಿಗಳು
- ಒಬ್ಬ ವ್ಯಕ್ತಿಯು ತನ್ನ ಆಧಾರ್ ಕಾರ್ಡಿನಲ್ಲಿ ಜೀವಮಾನದಲ್ಲಿ ಗರಿಷ್ಠ 2 ಬಾರಿ ಮಾತ್ರ ಹೆಸರನ್ನು ಬದಲಾಯಿಸಿಕೊಳ್ಳಲು ಅವಕಾಶವಿರುತ್ತದೆ.
- ಮದುವೆಯ ನಂತರದ ಬದಲಾವಣೆ ಅಥವಾ ಸಣ್ಣಪುಟ್ಟ ಕಾಗುಣಿತ ತಿದ್ದುಪಡಿಗಳಿಗೂ ಈ ಮಿತಿ ಅನ್ವಯಿಸುವುದರಿಂದ, ಅಂತಿಮವಾಗಿ ಬೇಕಾದ ಸರಿಯಾದ ಹೆಸರನ್ನು ಮೊದಲೇ ನಿರ್ಧರಿಸುವುದು ಒಳ್ಳೆಯದು.
2. ಯಾವ ಬದಲಾವಣೆಗಳಿಗೆ ಮಿತಿ ಅನ್ವಯಿಸುವುದಿಲ್ಲ?
- ಆಧಾರ್ ಕೇಂದ್ರದ ಆಪರೇಟರ್ ಮಾಡಿರುವ ಡೇಟಾ ಎಂಟ್ರಿ ಅಥವಾ ಕಾಗುಣಿತದ ತಪ್ಪನ್ನು ಸರಿಪಡಿಸುವುದು.
- ಪ್ರಾದೇಶಿಕ ಭಾಷೆಗೆ ಪರಿವರ್ತನೆ ಮಾಡುವಾಗ ಆಗುವ ದೋಷಗಳನ್ನು ಸರಿಪಡಿಸುವುದು
3. ಅನುಮತಿ ಇರುವ ಸಣ್ಣಪುಟ್ಟ ತಿದ್ದುಪಡಿಗಳು
- ಸಂಕ್ಷಿಪ್ತ ರೂಪ ವಿಸ್ತರಣೆ (Initials Expansion): ಉದಾಹರಣೆಗೆ, ಆರ್. ಕುಮಾರ್ ಎಂಬುದನ್ನು ರಮೇಶ್ ಕುಮಾರ್ ಎಂದು ಬದಲಾಯಿಸುವುದು.
- ಮಧ್ಯದ ಹೆಸರು ಸೇರಿಸುವುದು ಅಥವಾ ತೆಗೆದುಹಾಕುವುದು
- ಹೆಸರಿನ ಕ್ರಮ ಬದಲಾವಣೆ: ಉದಾಹರಣೆಗೆ, ದಿವಾಕರ್ ಆನಂದ್ ಎಂಬುದನ್ನು ಆನಂದ್ ದಿವಾಕರ್ ಎಂದು ಕ್ರಮ ಬದಲಾಯಿಸುವುದು.
- ಕಾಗುಣಿತ ದೋಷ ಸರಿಪಡಿಸುವುದು: Puja ಎಂಬುದನ್ನು Pooja ಎಂದೋ ಅಥವಾ Ram ಎಂಬುದನ್ನು Rama ಎಂದೋ ತಿದ್ದಿಕೊಳ್ಳುವುದು.
4.ಮದುವೆ ಹಾಗೂ ಸಂಪೂರ್ಣ ಹೆಸರು ಬದಲಾವಣೆಗೆ ನಿಯಮಗಳು
- ಮದುವೆಯ ನಂತರ ಸರ್ನೇಮ್ ಬದಲಾವಣೆ: ಮದುವೆಯ ನಂತರ ಉಪನಾಮ ಬದಲಾಯಿಸಲು ಮದುವೆ ಪ್ರಮಾಣಪತ್ರ (Marriage Certificate) ಕಡ್ಡಾಯವಾಗಿದೆ.
- ಸಂಪೂರ್ಣ ಹೆಸರು ಬದಲಾವಣೆ: ಇಡೀ ಹೆಸರನ್ನು ಸಂಪೂರ್ಣವಾಗಿ ಬದಲಾಯಿಸಲು ಬಯಸಿದರೆ, ರಾಜ್ಯ ಅಥವಾ ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆ ಹಾಗೂ ಅಧಿಕೃತ ಗುರುತಿನ ಚೀಟಿ ಸಲ್ಲಿಸುವುದು ಕಡ್ಡಾಯ.
5.ಅರ್ಜಿ ಸಲ್ಲಿಸುವ ವಿಧಾನ (How to Update)
- ಮೇಲಿನ ತಿದ್ದುಪಡಿಗಳಿಗಾಗಿ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಬಯೋಮೆಟ್ರಿಕ್ ಪರಿಶೀಲನೆ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅಪ್ಡೇಟ್ ಮಾಡಿಸಬೇಕಾಗುತ್ತದೆ.
- ಅರ್ಜಿ ಸಲ್ಲಿಸಿದ ನಂತರ ನಿಮಗೆ URN (Update Request Number) ಇರುವ ರಶೀದಿ ಸಿಗುತ್ತದೆ, ಇದರ ಮೂಲಕ ಸ್ಥಿತಿಗತಿಯನ್ನು ಟ್ರ್ಯಾಕ್ ಮಾಡಬಹುದು.
ಇದನ್ನೂ ಓದಿ :ಕೇಂದ್ರದ CDAC ಸಂಸ್ಥೆಯಿಂದ ಬೆಂಗಳೂರಿನಲ್ಲಿ 272 ಹುದ್ದೆಗಳ ನೇಮಕಾತಿ : 1.75 ಲಕ್ಷ ರೂ. ಸಂಬಳ!



















