ಬೀದರ್ : ತಮ್ಮನ ತಲೆಯ ಮೇಲೆ ಕಲ್ಲು ಎತ್ತಾಕಿ ಬರ್ಬರವಾಗಿ ಹತ್ಯೆಗೈದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶಿವಪುರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಸಚಿನ್ (25) ಕೊಲೆಯಾದ ವ್ಯಕ್ತಿ. ತಮ್ಮನನ್ನೇ ಕೊಲೆಗೈದ ಆರೋಪಿ ನಿತಿನ್ ರಾತ್ರಿ ಮಲಗಿದ್ದ ತಮ್ಮ ಸಚಿನ್ ತಲೆಯ ಮೇಲೆ ಕಲ್ಲು ಎತ್ತಾಕಿ ಹತ್ಯೆಗೈದಿದ್ದಾನೆ.
ಸಾರಾಯಿ ಕುಡಿಯೋಕೆ ಮನೆಯಲ್ಲಿ ಅಣ್ಣ & ಅಕ್ಕನ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ ಮೃತ ಸಚಿನ್ ಮನೆಯಲ್ಲಿದ್ದ ಸಾಮಾನುಗಳನ್ನು ಕೊಂಡೊಯ್ದು ಮಾರಾಟ ಮಾಡಿ ಕುಡಿಯುತ್ತಿದ್ದನಂತೆ.
ಇದರಿಂದ ಬೇಸತ್ತಿದ್ದ ಆರೋಪಿ ನಿತಿನ್ ನಿನ್ನೆ ರಾತ್ರಿ ಮಲಗಿದ್ದಾಗ ತಲೆಯ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಬಸವಕಲ್ಯಾಣ ನಗರ ಠಾಣೆ ಪಿಎಸ್ಐ ಚಂದ್ರಶೇಖರ್, ಸಿಪಿಐ ಅಲಿಸಾಬ್ ಭೇಟಿ ನೀಡಿ, ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ :ಜೈ ಶ್ರೀರಾಮ್ ಮಾತ್ರವೇಕೆ, ‘ಹರ ಹರ ಮಹಾದೇವ’ ಏಕಿಲ್ಲ?: ಬಿಜೆಪಿ ವಿರುದ್ಧ ರೇವಂತ್ ರೆಡ್ಡಿ ಪ್ರಹಾರ, ಕಮಲ ಪಡೆ ತಿರುಗೇಟು!


















