ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ 15 ಡಿಗ್ರಿ ಓರೆಯಾದ ಎಲ್ಇಡಿ ಡೋಮ್ ಪ್ಲಾನೆಟೋರಿಯಂ ನಿರ್ಮಾಣವಾಗಿದೆ. ಮೈಸೂರು ವಿವಿಯ 3.5 ಎಕರೆ ಪ್ರದೇಶದಲ್ಲಿ 115 ಕೋಟಿ ರೂಪಾಯಿ ವೆಚ್ಚದಲ್ಲಿ ಇದು ತಲೆಎತ್ತಿದೆ.
15 ಮೀಟರ್ ವ್ಯಾಪ್ತಿಯ ಈ ಗುಮ್ಮಟದಲ್ಲಿ ನೇರವಾಗಿ ಎಲ್ಇಡಿ ಮೂಲಕ ಆಕಾಶದ ದೃಶ್ಯಾವಳಿ ಪ್ರದರ್ಶನವಾಗಲಿದೆ. 8ಕೆ ರೆಸಲ್ಯೂಶನ್ ಹಾಗೂ ಫ್ರಾನ್ಸ್, ಜಪಾನ್ ಕನ್ಸೋರ್ಟಿಯಂ ಸಾಫ್ಟ್ವೇರ್ ಬಳಸಲಾಗಿದೆ. ಏಕಕಾಲದಲ್ಲಿ 150 ಜನರು ವೀಕ್ಷಿಸಲು ಅವಕಾಶವಿದ್ದು, ಇದು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕೇಂದ್ರವಾಗಲಿದೆ.


















