ನವದೆಹಲಿ : ಸಾಮಾಜಿಕ ಜಾಲತಾಣದ ಕಂಟೆಂಟ್ ಕ್ರಿಯೇಟರ್ ಒಬ್ಬರು ದೆಹಲಿಯಲ್ಲಿ ರಾತ್ರಿಯ ವೇಳೆಯಲ್ಲಿ ಮಹಿಳೆಯರ ಸುರಕ್ಷತೆಯ ನೈಜ ಸ್ಥಿತಿಯನ್ನು ಅರಿಯಲು ವಿಭಿನ್ನ ಪ್ರಯೋಗವೊಂದನ್ನು ನಡೆಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ‘BeJaintle’ ಎಂದು ಗುರುತಿಸಿಕೊಂಡಿರುವ ಈ ಯುವಕ, ಮನೆಯಲ್ಲೇ ಮಹಿಳೆಯ ಉಡುಪು ಧರಿಸಿ, ಮೇಕಪ್ ಮಾಡಿಕೊಂಡು, ದುಪಟ್ಟಾದಿಂದ ಮುಖ ಮತ್ತು ತಲೆಯನ್ನು ಮುಚ್ಚಿಕೊಂಡು ಸ್ಕೂಟರ್ನಲ್ಲಿ ನಗರ ಸಂಚಾರಕ್ಕೆ ಇಳಿದಿದ್ದರು. ಆದರೆ, ಈ ಪ್ರಯೋಗ ಆರಂಭವಾದ ಕೆಲವೇ ಸಮಯದಲ್ಲಿ ಅವರು ಎದುರಿಸಿದ ಅತ್ಯಂತ ಕಹಿ ಹಾಗೂ ಭಯಾನಕ ಅನುಭವಗಳು ಅವರನ್ನೇ ಬೆಚ್ಚಿಬೀಳಿಸಿವೆ.
ಹಾದಿಯುದ್ದಕ್ಕೂ ಹಿಂಬಾಲಿಸುವಿಕೆ, ಅನಗತ್ಯ ಕಿರುಕುಳ
ರಸ್ತೆಗೆ ಇಳಿದ ತಕ್ಷಣವೇ ಅಪರಿಚಿತರು ದುರುಗುಟ್ಟಿ ನೋಡಲು ಆರಂಭಿಸಿದರು. ಸ್ಕೂಟರ್ ಓಡಿಸುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಸುಖಾಸುಮ್ಮನೆ ದಿಟ್ಟಿಸಿ ನೋಡುತ್ತಿದ್ದರಲ್ಲದೆ, ಸ್ಕೂಟರ್ ಅನ್ನು ಹಿಂಬಾಲಿಸುತ್ತಾ ಹತ್ತಿರ ಬರಲು ಯತ್ನಿಸಿದರು. ಮತ್ತೊಂದು ಸಂದರ್ಭದಲ್ಲಿ, ಚಲಿಸುತ್ತಿದ್ದಾಗ ಒಬ್ಬ ವ್ಯಕ್ತಿ ಹತ್ತಿರ ಬಂದು ಮಾತನಾಡಿಸಲು ಯತ್ನಿಸಿದರೆ, ಆಟೋ ಚಾಲಕರು ಮತ್ತು ಸೈಕಲ್ ಸವಾರರು ಅನಗತ್ಯವಾಗಿ ವಾಹನದ ಹಾದಿಗೆ ಅಡ್ಡ ಬಂದು ಕಿರುಕುಳ ನೀಡಲು ಯತ್ನಿಸಿದರು. ಗೆಳೆಯರು ವೀಡಿಯೊ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ನಂತರವೇ ಕೆಲವರು ಅಲ್ಲಿಂದ ಕಾಲ್ಕಿತ್ತರು.
ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ
ಕೇವಲ ಎರಡು ಗಂಟೆಗಳಲ್ಲಿ ಎದುರಾದ ಬೆದರಿಕೆ ಹಾಗೂ ಹಿಂಸಾತ್ಮಕ ನಡವಳಿಕೆಗಳಿಂದ ಬೆಚ್ಚಿಬಿದ್ದ ಕ್ರಿಯೇಟರ್, ಪ್ರಯೋಗವನ್ನು ಅರ್ಧಕ್ಕೇ ಕೈಬಿಟ್ಟಿದ್ದಾರೆ. “ಕಳೆದ ಎರಡು ಗಂಟೆಗಳಲ್ಲಿ ನನಗಾದ ಅನುಭವ ಅತ್ಯಂತ ಅಸಹ್ಯಕರವಾಗಿತ್ತು. ರಾತ್ರಿಯ ವೇಳೆ ಹೆಣ್ಣುಮಕ್ಕಳು ಒಬ್ಬರೇ ಹೊರಗೆ ಬರುವುದು ಖಂಡಿತವಾಗಿಯೂ ಸುರಕ್ಷಿತವಲ್ಲ,” ಎಂದು ಅವರು ತಮ್ಮ ವಿಡಿಯೋದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಸಾರ್ವಜನಿಕ ನಡವಳಿಕೆಯ ಕುರಿತು ಮತ್ತೊಮ್ಮೆ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ.
ಇದನ್ನೂ ಓದಿ ; ಕೇಂದ್ರ ಸರ್ಕಾರದ NTPC ಸಂಸ್ಥೆಯಲ್ಲಿ ನೇಮಕಾತಿ : ಕರ್ನಾಟಕದಲ್ಲೇ ಉದ್ಯೋ



















