ದೇಶ ವಿರೋಧಿಗಳು ಯಾರು ಮತ್ತು ವಿದೇಶಿ ಶಕ್ತಿಗಳೊಂದಿಗೆ ಯಾರಿಗೆಲ್ಲ ಸಂಬಂಧವಿದೆ ಎಂಬುದರ ಕುರಿತು ಒಂದೇ ಮೇಜಿನ ಮುಂದೆ ಬಂದು ನೇರ ಚರ್ಚೆಗೆ ಬರುವಂತೆ ಪ್ರಧಾನಿ ಮೋದಿಯವರಿಗೆ ರಾಹುಲ್ ಗಾಂಧಿ ಮತ್ತೆ ಸವಾಲು ಹಾಕಿದ್ದಾರೆ. ಈ ಚರ್ಚೆಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಮಧ್ಯಸ್ಥಿಕೆ ವಹಿಸಲಿ ಎಂದಿರುವ ರಾಹುಲ್, ಯುಎಸ್ ಒಪ್ಪಂದ ಹೇಗೆ ನಡೆಯಿತು ಮತ್ತು ಏಕೆ ನಡೆಯಿತು ಎಂದು ಪ್ರಶ್ನಿಸಿದ್ದಾರೆ.
ಇತ್ತ ರಾಹುಲ್ ಗಾಂಧಿ ಸವಾಲಿಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸವಾಲು ಹಾಕುವುದನ್ನು ಬಿಟ್ಟು ಧೈರ್ಯವಿದ್ದರೆ ಪಾರ್ಲಿಮೆಂಟ್ಗೆ ಬನ್ನಿ ಎಂದು ಅಮಿತ್ ಶಾ ಟಾಂಗ್ ನೀಡಿದ್ದಾರೆ.



















