ಬೆಂಗಳೂರು: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ನೀಡಿರುವ ನಿರ್ದೇಶನಗಳಿಗೆ ಅನುಗುಣವಾಗಿ, ದೇಶದ ಪ್ರಮುಖ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ನಾಲ್ಕು ಹೊಸ ‘ವಾಯ್ಸ್-ಓನ್ಲಿ’ (Voice-Only) ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಯಾವುದೇ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಕೆ ಮಾಡದೆ, ಕೇವಲ ಕರೆಗಳ ಹಾಗೂ ಎಸ್ಎಂಎಸ್ ಸೌಲಭ್ಯ ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ಲಾನ್ ಗಳನ್ನು ಪರಿಚಯಿಸಲಾಗಿದೆ.
4 ಪ್ಲಾನ್ ಗಳ ಮಾಹಿತಿ ಇಲ್ಲಿದೆ
- 147 ರೂಪಾಯಿಯ ಪ್ಲಾನ್: ಈ ಯೋಜನೆಯು 22 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅನ್ ಲಿಮಿಟೆಡ್ ವಾಯ್ಸ್ ಕಾಲಿಂಗ್ ಹಾಗೂ ಒಟ್ಟು 300 ಎಸ್ಎಂಎಸ್ ಸೌಲಭ್ಯವನ್ನು ಒದಗಿಸುತ್ತದೆ.
- 177 ರೂಪಾಯಿಯ ಪ್ಲಾನ್: ಇದು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲೂ ಅನ್ ಲಿಮಿಟೆಡ್ ಕರೆಗಳು ಮತ್ತು 300 ಎಸ್ಎಂಎಸ್ ಲಭ್ಯ ಇವೆ.
- 196 ರೂಪಾಯಿಯ ಪ್ಲಾನ್: ಈ ಪ್ಲಾನ್ 30 ದಿನಗಳ ಕಾಲ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 300 ಎಸ್ಎಂಎಸ್ ಕಳುಹಿಸುವ ಸೌಲಭ್ಯ ಹೊಂದಿದೆ.
- 197 ರೂಪಾಯಿಯ ಪ್ಲಾನ್: ಈ ಯೋಜನೆಯು ಪೂರ್ಣ ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅನ್ ಲಿಮಿಟೆಡ್ ಕಾಲ್ ಹಾಗೂ 300 ಎಸ್ಎಂಎಸ್ ಸೌಲಭ್ಯವನ್ನು ಒಳಗೊಂಡಿದೆ.
ಗಮನಿಸಬೇಕಾದ ಅಂಶವೆಂದರೆ, ಈ ಯಾವುದೇ ಪ್ಲಾನ್ ಗಳಲ್ಲಿ ಮೊಬೈಲ್ ಡೇಟಾ (ಇಂಟರ್ನೆಟ್) ಸೌಲಭ್ಯ ದೊರೆಯುವುದಿಲ್ಲ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ವೈ-ಫೈ ಸಂಪರ್ಕ ಬಳಸುವ ಸ್ಮಾರ್ಟ್ ಫೋನ್ ಬಳಕೆದಾರರಿಗೆ, ಫೀಚರ್ ಫೋನ್ ಬಳಸುವ ಹಿರಿಯ ನಾಗರಿಕರಿಗೆ ಮತ್ತು ತಮ್ಮ ಸಿಮ್ ಕಾರ್ಡ್ ಅನ್ನು ಕೇವಲ ಇನ್ ಕಮಿಂಗ್ ಹಾಗೂ ಔಟ್ ಗೋಯಿಂಗ್ ಕರೆಗಳಿಗಾಗಿ ಮಾತ್ರ ಸಕ್ರಿಯವಾಗಿಡಲು ಬಯಸುವವರಿಗೆ ಈ ಯೋಜನೆಗಳು ಅತ್ಯಂತ ಪ್ರಯೋಜನಕಾರಿಯಾಗಿವೆ.


















