ಬೆಂಗಳೂರು : ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮೆಟ್ರೋದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಸಂಚರಿಸಿದ್ದಾರೆ. ಕಳೆದ ರಾತ್ರಿ ಮೆಜೆಸ್ಟಿಕ್‌ನಿಂದ ಕೋಣನಕುಂಟೆವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ ಅವರು, ಕ್ಯೂನಲ್ಲಿ ನಿಂತು ಯುಪಿಐ ಮೂಲಕ ಟಿಕೆಟ್ ಖರೀದಿಸಿದ್ದಾರೆ.
ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಸಚಿವರು ನಿಂತುಕೊಂಡೇ ಸಂಚರಿಸಿದ್ದು, ಯಾವುದೇ ವಿಶೇಷ ವ್ಯವಸ್ಥೆ ಬಳಸದೆ ಸಾಮಾನ್ಯ ಪ್ರಯಾಣಿಕರೊಂದಿಗೆ ಪ್ರಯಾಣಿಸಿದ್ದಾರೆ. ಈ ವೇಳೆ ಸಹಪ್ರಯಾಣಿಕರೊಂದಿಗೆ ಮಾತನಾಡಿದ್ದು, ಕೆಲವರು ಸಚಿವರೊಂದಿಗೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ.
ಕೋಣನಕುಂಟೆಗೆ ತೆರಳಿದ ಬಳಿಕ ಸಚಿವರು ಮತ್ತೆ ಮೆಟ್ರೋದಲ್ಲೇ ವಾಪಸ್ ಪ್ರಯಾಣಿಸಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 2ರಂದು ಕೂಡ ಕೃಷ್ಣಬೈರೇಗೌಡ ಅವರು ಮೆಟ್ರೋದಲ್ಲಿ ಪ್ರಯಾಣಿಸಿ, ಗುಲಾಬಿ ಮಾರ್ಗದ ಕಾಮಗಾರಿಗಳ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ : ಕೆಪಿಎಸ್ಸಿ ಕರ್ಮಕಾಂಡದ ಮತ್ತೊಂದು ಅಕ್ರಮ ಬಯಲು!



















