ಬೆಂಗಳೂರು : ವಾಹನ ಚಾಲಕರು ಗಮನಿಸಬೇಕಾದ ಸುದ್ದಿಯೊಂದು ದೊರೆತಿದೆ. ನೀವು ವಾಹನ ಚಾಲಕರಾಗಿದ್ದು, ಹಳೆಯ ಡ್ರೈವಿಂಗ್ ಲೈಸೆನ್ಸ್ (Driving Licence) ಹೊಂದಿದ್ದರೆ ಈ ಸುದ್ದಿ ನಿಮಗೆ ಮುಖ್ಯವಾಗಿದೆ. ವಾಹನ ಚಲಾಯಿಸುವಾಗ ಚಾಲನಾ ಪರವಾನಗಿ ಕಡ್ಡಾಯವಾಗಿರಬೇಕು. ಆದರೆ, ಲೈಸೆನ್ಸ್ ಹೊಂದಿರುವುದು ಮಾತ್ರವಲ್ಲದೆ, ಕಾಲಕಾಲಕ್ಕೆ ಅದರಲ್ಲಿನ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳುವುದೂ ಅಷ್ಟೇ ಮುಖ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಲಾಗಿದೆ.
ಸಂಚಾರಿ ಪೊಲೀಸ್ ತಪಾಸಣೆಯ ವೇಳೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಫೋಟೋ, ಮೊಬೈಲ್ ನಂಬರ್ ಮುಂತಾದ ಅಗತ್ಯ ವಿವರಗಳು ಅಪ್ಡೇಟ್ ಆಗಿಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬೇಕಾಗಬಹುದು. ಹೀಗಾಗಿ, ನಿಮ್ಮ ಲೈಸೆನ್ಸ್ ನಲ್ಲಿ ಮೊಬೈಲ್ ನಂಬರ್ ಲಿಂಕ್ ಅಥವಾ ಅಪ್ಡೇಟ್ ಆಗಿದೆಯೇ ಎಂಬುದನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ.
ಸೆಪ್ಟೆಂಬರ್ 25ರ ಗಡುವು
ವರದಿಗಳ ಪ್ರಕಾರ, ಡ್ರೈವಿಂಗ್ ಲೈಸೆನ್ಸ್ ಗೆ ಮೊಬೈಲ್ ನಂಬರ್ ಅಪ್ಡೇಟ್ ಮಾಡಲು ಸೆಪ್ಟೆಂಬರ್ 25 ಅನ್ನು ಗಡುವಾಗಿ ನಿಗದಿಪಡಿಸಲಾಗಿದೆ ಎನ್ನಲಾಗಿದೆ. ಈ ನಿರ್ದಿಷ್ಟ ದಿನದೊಳಗೆ ನೀವು ಈ ಪ್ರಮುಖ ಕೆಲಸವನ್ನು ಪೂರ್ಣಗೊಳಿಸದಿದ್ದರೆ, ನಿಮ್ಮ ಲೈಸೆನ್ಸ್ ಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಹಾಗೂ ಲೈಸೆನ್ಸ್ ರದ್ದಾಗುವ ಅಥವಾ ಸಸ್ಪೆಂಡ್ ಆಗುವ ಅಪಾಯವೂ ಇರುತ್ತದೆ.
ಆನ್ ಲೈನ್ ನಲ್ಲಿ ಅಪ್ಡೇಟ್ ಮಾಡುವುದು ಹೇಗೆ?
ಹಳೆಯ ಲೈಸೆನ್ಸ್ ಗಳಲ್ಲಿ ಮೊಬೈಲ್ ನಂಬರ್ ನೋಂದಣಿ ಆಗಿರುವುದಿಲ್ಲ. ಹಾಗಾಗಿ ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಈ ಕೆಳಗಿನ ಹಂತಗಳನ್ನು ಅನುಸರಿಸಿ ನೀವು ಮೊಬೈಲ್ ನಂಬರ್ ಅಪ್ಡೇಟ್ ಮಾಡಬಹುದು.
• ಸಾರಥಿ ಪರಿವರ್ತನ್ sarathi.parivahan.gov.in ಗೆ ಭೇಟಿ ನೀಡಿ.
• ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ‘Others’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
• ಅಲ್ಲಿ ಕಾಣಿಸಿಕೊಳ್ಳುವ ‘Update Mobile Number’ ಆಯ್ಕೆಯನ್ನು ಆರಿಸಿ.
• ‘Select Criteria’ ಅಡಿಯಲ್ಲಿ ‘Driving Licence’ ಆಯ್ಕೆ ಮಾಡಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿ.
• ನಿಮ್ಮ ಪರದೆಯ ಮೇಲೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ನ ವಿವರಗಳು ಗೋಚರಿಸುತ್ತವೆ, ಅದನ್ನು ಪರಿಶೀಲಿಸಿ.
• ನಂತರ ನಿಮ್ಮ ಹೊಸ ಮೊಬೈಲ್ ನಂಬರ್ ಅನ್ನು ನಮೂದಿಸಿ ‘Proceed’ ನೀಡಿ.
• ನಿಮ್ಮ ಹೊಸ ನಂಬರ್ ಗೆ ಬರುವ OTP ನಮೂದಿಸಿ ಪರಿಶೀಲಿಸಿದರೆ (Verify), ನಿಮ್ಮ ಮೊಬೈಲ್ ನಂಬರ್ ಯಶಸ್ವಿಯಾಗಿ ಅಪ್ಡೇಟ್ ಆಗುತ್ತದೆ.
ಇದನ್ನೂ ಓದಿ : ‘ಲೋಕಾ’ ಟ್ರ್ಯಾಪ್‌ನಿಂದ ಯಲಹಂಕ ನ್ಯೂಟೌನ್ ಇನ್ಸ್‌ಪೆಕ್ಟರ್ ಎಸ್ಕೇಪ್!


















