ಮೈಸೂರು : ಬೀಗರ ಔತಣ ಮುಗಿಸಿ ವಾಪಸ್ ಬರುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 13ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಚಾಮನಹಳ್ಳಿ ಹುಂಡಿ ಬಳಿ ತಡರಾತ್ರಿ ನಡೆದಿದೆ.
ಹೆಚ್.ಡಿ.ಕೋಟೆ ಪಟ್ಟಣದ ಸೋಮಣ್ಣ ಕುಟುಂಬದ ಬೀಗರ ಔತಣ ಕಾರ್ಯಕ್ರಮ ಮುಗಿಸಿಕೊಂಡು ಸಿದ್ದಪ್ಪಾಜಿ ಬೀದಿ ನಿವಾಸಿಗಳು ಟೆಂಪೋದಲ್ಲಿ ವಾಪಸ್ ಬರುತ್ತಿದ್ದರು. ಗದ್ದಿಗೆ ಮಾರ್ಗವಾಗಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಂದರ್ಭದಲ್ಲಿ ಟೆಂಪೋ ಪಲ್ಟಿಯಾಗಿದೆ.
ಅಪಘಾತದಲ್ಲಿ ಅಂಜಲಿ (18), ಪುನೀತ್ (25), ಬಸವರಾಜು (30), ಮಲ್ಲಿಕಾ (35), ಧನು (30), ದೇವಣ್ಣ (40) ಸೇರಿದಂತೆ 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಅನಧಿಕೃತ ಇ-ಕಾಮರ್ಸ್ ಗೋದಾಮುಗಳ ಮೇಲೆ ಎಫ್‌ಡಿಎ ದಾಳಿ ; 4.02 ಲಕ್ಷ ಮೌಲ್ಯದ ಔಷಧ ವಶ


















