ಹೊಸಪೇಟೆ : ಹೊಸಪೇಟೆಯಲ್ಲಿ ನಾಲ್ಕೈದು ತಿಂಗಳಿಂದ ಪಾಳು ಬಿದ್ದಿದ್ದ ಇಂದಿರಾ ಕ್ಯಾಂಟಿನ್ ಅವ್ಯವಸ್ಥೆಯ ಕುರಿತು ನಿಮ್ಮ ‘ನ್ಯೂಸ್ ಬೀಟ್’ ವಾಹಿನಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಬಳಿಕ ಇದೀಗ ಜಿಲ್ಲಾ ಕ್ರೀಡಾಂಗಣದ ಬಳಿಯ ಇಂದಿರಾ ಕ್ಯಾಂಟಿನ್‌ಗೆ ಹೊಸ ರೂಪ ನೀಡಿ ಗ್ರ್ಯಾಂಡ್ ಓಪನಿಂಗ್ ಮಾಡಲಾಗಿದೆ.
ಬಣ್ಣ ಬಣ್ಣದ ಹೂಗಳಿಂದ ಕ್ಯಾಂಟಿನ್‌ನ್ನು ಅಲಂಕರಿಸಲಾಗಿದ್ದು, ರಂಗೋಲಿ ಬಿಡಿಸಿ ಅದ್ಧೂರಿಯಾಗಿ ಉದ್ಘಾಟನಾ ಕಾರ್ಯಕ್ರಮ ನಡೆಸಲಾಗಿದೆ.
ಸಂಸದ ತುಕಾರಾಂ ಇಂದಿರಾ ಕ್ಯಾಂಟಿನ್‌ಗೆ ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ನಗರಸಭೆ ಆಯುಕ್ತ ಶಿವಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಪಾಳು ಬಿದ್ದಿದ್ದ ಕ್ಯಾಂಟಿನ್ ಅವ್ಯವಸ್ಥೆ ಬಯಲು ಮಾಡಿದ ನ್ಯೂಸ್ ಬೀಟ್ ವರದಿ ಇದೀಗ ಬಿಗ್ ಇಂಪ್ಯಾಕ್ಟ್ ತಂದಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಪ್ರಾಜೆಕ್ಟ್ ಬ್ರೋಷರ್ ಬರೀ ಮಾರ್ಕೆಟಿಂಗ್ ಅಲ್ಲ, ಗ್ರಾಹಕರಿಗೆ ಕೊಟ್ಟ ವಾಗ್ದಾನ : ಬಿಲ್ಡರ್‌ಗಳಿಗೆ ಸುಪ್ರೀಂ ಎಚ್ಚರಿಕೆ



















