ಬೆಂಗಳೂರು : ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರಕ್ಕೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಕಂಡುಬಂದಿದ್ದು, ಫ್ಯಾನ್ಸ್ ಶೋ ಹಾಗೂ ಮಾರ್ನಿಂಗ್ ಶೋಗಳಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಆರಂಭಿಕ ಗಳಿಕೆ 90 ಕೋಟಿ ರೂಪಾಯಿ ತಲುಪಿದೆ ಎಂಬ ಮಾಹಿತಿ ಚಿತ್ರತಂಡದ ವಲಯದಲ್ಲಿ ಕೇಳಿಬರುತ್ತಿದೆ.
ಚಿತ್ರದ ಅಡ್ವಾನ್ಸ್ ಬುಕಿಂಗ್ನಲ್ಲೂ ‘ಟಾಕ್ಸಿಕ್’ ದಾಖಲೆ ಬರೆದಿದ್ದು, ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಬೆಳಗ್ಗಿನ ಐದು ಆಟಗಳೂ ಹೌಸ್ಫುಲ್ ಆಗಿವೆ. ಫ್ಯಾನ್ಸ್ ಶೋಗಳಿಂದ ಆರಂಭವಾದ ಟಾಕ್ಸಿಕ್ ಕ್ರೇಜ್ ಮಧ್ಯಾಹ್ನ ಹಾಗೂ ಸಂಜೆ ಶೋಗಳಿಗೂ ಮುಂದುವರಿದಿದ್ದು, ಹಲವು ಕಡೆ ಟಿಕೆಟ್ಗಳು ಬಹುತೇಕ ಸೋಲ್ಡ್ಔಟ್ ಆಗಿವೆ.
‘ಟಾಕ್ಸಿಕ್’ಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಕೇಂದ್ರಗಳಲ್ಲೂ ಚಿತ್ರದ ಕ್ರೇಜ್ ಹೆಚ್ಚಾಗಿದೆ. ವಿಶೇಷವಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಚಿತ್ರದ ಆರಂಭಿಕ ಯಶಸ್ಸಿಗೆ ಮತ್ತಷ್ಟು ಬಲ ನೀಡಿದೆ.
ರಾಜ್ಯಾದ್ಯಂತ ಚಿತ್ರಕ್ಕೆ ಸರಾಸರಿ 75ರಷ್ಟು ಪ್ರೇಕ್ಷಕರ ಹಾಜರಾತಿ ಕಂಡುಬಂದಿದ್ದು, ಬಿಡುಗಡೆಯ ಆರಂಭದಲ್ಲೇ ‘ಟಾಕ್ಸಿಕ್’ ಜಯಭೇರಿ ಬಾರಿಸಿದೆ. ಯಶ್ ಅಭಿಮಾನಿಗಳ ಸಂಭ್ರಮದ ನಡುವೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಚಿತ್ರಮಂದಿರಗಳು ಟಾಕ್ಸಿಕ್ಮಯವಾಗಿವೆ.
ಇದನ್ನೂ ಓದಿ : ವಿಶ್ವದೆಲ್ಲೆಡೆ ‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್ ; ಮುಗಿಲು ಮುಟ್ಟಿದ ಯಶ್ ಫ್ಯಾನ್ಸ್ ಸಂಭ್ರಮ!



















