ಬೆಂಗಳೂರು : ರಾಜ್ಯದಲ್ಲಿ ಜೂನ್ 29ರಿಂದ ಆಗಸ್ಟ್ 17ರವರೆಗೆ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮುಕ್ತಾಯಗೊಂಡಿದೆ. ಭಾರತೀಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಜ್ಯಾದ್ಯಂತ 5.54 ಕೋಟಿ ಮತದಾರರ Enumeration Forms ವಿತರಣೆ ಪೂರ್ಣಗೊಂಡಿದ್ದು, 4.46 ಕೋಟಿಗೂ ಅಧಿಕ ಫಾರ್ಮ್‌ಗಳ ಡಿಜಿಟಲೀಕರಣವಾಗಿದೆ.
ರಾಜ್ಯದಲ್ಲಿ ಒಟ್ಟು 5,54,32,314 Enumeration Forms ವಿತರಿಸಲಾಗಿದ್ದು, ಈ ಪೈಕಿ 4,46,00,369 ಫಾರ್ಮ್‌ಗಳು ಡಿಜಿಟಲೀಕರಣಗೊಂಡಿವೆ. ಅಂದರೆ ಶೇ.80.46ರಷ್ಟು ಮತದಾರರ ಫಾರ್ಮ್‌ಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಉಳಿದ ಮತದಾರರ ಪೈಕಿ 1,08,31,945 ಮಂದಿಯನ್ನು ASDDO ಪಟ್ಟಿಗೆ ಗುರುತಿಸಲಾಗಿದೆ. ಇದು ಒಟ್ಟು ಮತದಾರರ ಶೇ.19.54ರಷ್ಟಾಗಿದೆ.
ASDDO ಪಟ್ಟಿಯಲ್ಲಿ 15,28,985 ಮಂದಿ ಪತ್ತೆಯಾಗದ ಅಥವಾ ಹಾಜರಿಲ್ಲದವರು, 65,61,607 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 16,38,839 ಮಂದಿ ಮೃತಪಟ್ಟವರು, 7,07,792 ಮಂದಿ ಈಗಾಗಲೇ ಮತ್ತೊಂದು ಕಡೆ ನೋಂದಣಿಯಾಗಿರುವವರು ಹಾಗೂ 3,94,722 ಮಂದಿಯನ್ನು ಇತರೆ ವಿಭಾಗಗಳಲ್ಲಿ ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ASDDO ಪ್ರಮಾಣ ಹೆಚ್ಚು:
ರಾಜ್ಯದ ಸರಾಸರಿ ಶೇ.19.54ಕ್ಕೆ ಹೋಲಿಸಿದರೆ ಬೆಂಗಳೂರಿನ ಹಲವು ಭಾಗಗಳಲ್ಲಿ ASDDO ಪ್ರಮಾಣ ಗಮನಾರ್ಹವಾಗಿ ಹೆಚ್ಚಿದೆ. ಬೆಂಗಳೂರು ದಕ್ಷಿಣದಲ್ಲಿ ಶೇ.49.61, BBMP ಸೆಂಟ್ರಲ್‌ನಲ್ಲಿ ಶೇ.45.84, BBMP ನಾರ್ತ್‌ನಲ್ಲಿ ಶೇ.45.36 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.42.94ರಷ್ಟು ಮತದಾರರನ್ನು ASDDO ಪಟ್ಟಿಗೆ ಗುರುತಿಸಲಾಗಿದೆ. ಇದಕ್ಕೆ ವಿರುದ್ಧವಾಗಿ, ಫಾರ್ಮ್‌ಗಳ ಡಿಜಿಟಲೀಕರಣದಲ್ಲೂ ಬೆಂಗಳೂರಿನ ಭಾಗಗಳು ಹಿಂದುಳಿದಿವೆ. BBMP ದಕ್ಷಿಣದಲ್ಲಿ ಶೇ.50.39, ಸೆಂಟ್ರಲ್‌ನಲ್ಲಿ ಶೇ.54.16, ನಾರ್ತ್‌ನಲ್ಲಿ ಶೇ.54.64 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.57.06ರಷ್ಟು ಡಿಜಿಟಲೀಕರಣವಾಗಿದೆ. ರಾಜ್ಯದಲ್ಲಿ ಉಡುಪಿ ಜಿಲ್ಲೆ ಶೇ.94.04ರಷ್ಟು ಡಿಜಿಟಲೀಕರಣದೊಂದಿಗೆ ಅಗ್ರಸ್ಥಾನದಲ್ಲಿದೆ. ಹಾವೇರಿ ಶೇ.91.38, ಉತ್ತರ ಕನ್ನಡ ಶೇ.91.30 ಹಾಗೂ ದಕ್ಷಿಣ ಕನ್ನಡ ಶೇ.91.26ರಷ್ಟು ಡಿಜಿಟಲೀಕರಣ ಸಾಧಿಸಿವೆ.
ಆನ್‌ಲೈನ್ ಮೂಲಕ 7.11 ಲಕ್ಷ ಫಾರ್ಮ್ ಸಲ್ಲಿಕೆ
SIR ಪ್ರಕ್ರಿಯೆಯಲ್ಲಿ ಮತದಾರರು ಆನ್‌ಲೈನ್ ಮೂಲಕವೂ ಫಾರ್ಮ್ ಸಲ್ಲಿಸಿದ್ದಾರೆ. ಒಟ್ಟು 7,11,712 Enumeration Forms ಅನ್ನು ಮತದಾರರೇ ಆನ್‌ಲೈನ್‌ನಲ್ಲಿ ಸಲ್ಲಿಸಿದ್ದು, ಇದು ಶೇ.1.28ರಷ್ಟಾಗಿದೆ.
ಹೊಸ ಮತದಾರರಿಗೆ ಅವಕಾಶ
ಅಕ್ಟೋಬರ್ 1, 2026ಕ್ಕೆ 18 ವರ್ಷ ಪೂರ್ಣಗೊಳ್ಳುವವರಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶ ನೀಡಲಾಗಿದೆ. ಅರ್ಹರು Form-6 ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 16ರಿಂದ ಆಗಸ್ಟ್ 16ರವರೆಗೆ ಒಟ್ಟು 13,32,348 ಅರ್ಜಿಗಳು ಸ್ವೀಕಾರವಾಗಿವೆ. ಇದರಲ್ಲಿ Form-6 ಅಡಿ 4,28,679, Form-6A ಅಡಿ 3,710, Form-7 ಅಡಿ 31,554 ಹಾಗೂ Form-8 ಅಡಿ 8,68,405 ಅರ್ಜಿಗಳು ಬಂದಿವೆ.
ASDDO ಪಟ್ಟಿಯ ಬಗ್ಗೆ ಮತದಾರರಿಗೆ ಅವಕಾಶ
ASDDO ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ಹಸ್ತಾಂತರಿಸಲಾಗಿದ್ದು, BLOಗಳಲ್ಲಿಯೂ ಪರಿಶೀಲನೆಗೆ ಲಭ್ಯವಿದೆ. ತಮ್ಮ ಹೆಸರು ತಪ್ಪಾಗಿ ASDDO ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೆ, ಮತದಾರರು BLO ಅಥವಾ ERO ಮೂಲಕ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ. ಅಲ್ಲದೆ, ಮತದಾರರು ತಮ್ಮ ವಿವರಗಳನ್ನು CEO ಕರ್ನಾಟಕದ ಅಧಿಕೃತ ವೆಬ್‌ಸೈಟ್ ಮೂಲಕವೂ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಕೇಂದ್ರ ಚುನಾವಣಾ ಅಯೋಗ ಮಾಹಿತಿ ನೀಡಿದೆ.
ಇದನ್ನೂ ಓದಿ : ನಾಗೇಂದ್ರ ರಾಜೀನಾಮೆಗೆ ಬಿಜೆಪಿ-ಜೆಡಿಎಸ್ ಬಿಗಿಪಟ್ಟು ; ಉಭಯ ಸದನಗಳಲ್ಲೂ ಹೋರಾಟ ತೀವ್ರಗೊಳಿಸಲು ವಿಪಕ್ಷ ಸಜ್ಜು!
ಇದನ್ನೂ ಓದಿ :



















